ಎರಡು ದಶಕಗಳ ಬಳಿಕ ಮತ್ತೆ ಒಂದಾಗುತ್ತಿದ್ದಾರೆ ಶಿವಣ್ಣ-ಶಶಿಕುಮಾರ್ !

Promotion

ಬೆಂಗಳೂರು, ನವೆಂಬರ್ 21, 2020 (www.justkannada.in): ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಶಶಿಕುಮಾರ್ ಮತ್ತೆ ಒಂದಾಗುತ್ತಿದ್ದಾರೆ.

ಹೌದು. ಸ್ಯಾಂಡಲ್ ವುಡ್ ನಲ್ಲಿ ಸಕ್ಸಸ್ ಜೋಡಿ ನಟರ ಪೈಕಿ ಶಿವರಾಜ್ ಕುಮಾರ್ ಮತ್ತು ಶಶಿಕುಮಾರ್ ಕೂಡಾ ಒಂದು. ಇದೀಗ ಬರೋಬ್ಬರಿ 20 ವರ್ಷಗಳ ಬಳಿಕ ಈ ಜೋಡಿ ಮತ್ತೆ ಒಂದಾಗುತ್ತಿದೆ.

ಶಶಿಕುಮಾರ್-ಶಿವಣ್ಣ ಜೋಡಿ ಜತೆಯಾಗಿ ಒಂದೇ ಸಿನಿಮಾದಲ್ಲಿ ನಟಿಸಲಿದ್ದಾರೆ. ವಿಜಯ್ ಮಿಲ್ಟನ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಈ ಜೋಡಿ ಮತ್ತೆ ತೆರೆ ಹಂಚಿಕೊಳ್ಳಲಿದೆ.

ಈ ಮೊದಲು 2001 ರಲ್ಲಿ ಬಹಳ ಚೆನ್ನಾಗಿದೆ ಸಿನಿಮಾದಲ್ಲಿ ಇಬ್ಬರೂ ಜತೆಯಾಗಿ ನಟಿಸಿದ್ದೇ ಕೊನೆಯ ಸಿನಿಮಾವಾಗಿತ್ತು.