ಗಡಿನಾಡ ಸಾಹಿತ್ಯ, ಸಾಂಸ್ಕೃತಿಕ ಅಕಾಡೆಮಿ ಪ್ರಶಸ್ತಿಗೆ ಶಿವಾನಂದ ತಗಡೂರು ಆಯ್ಕೆ.

Promotion

ಬೆಂಗಳೂರು,ಡಿಸೆಂಬರ್,10,2022(www.justkannada.in):  ಕೇರಳ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕೊಡಮಾಡುವ  ಕನ್ನಡ ರಾಜ್ಯೋತ್ಸವ ಹಾಗೂ ಗಡಿನಾಡ ರಾಜ್ಯೋತ್ಸವ ಪ್ರಶಸ್ತಿಗೆ ಹಿರಿಯ ಪತ್ರಕರ್ತರು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ  ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಆಯ್ಕೆ ಆಗಿದ್ದಾರೆ.

ಪ್ರಶಸ್ತಿ ಪ್ರದಾನ  ಸಮಾರಂಭವು ಕಾಸರಗೋಡಿನಲ್ಲಿ ಡಿಸೆಂಬರ್ 11 ಭಾನುವಾರದಂದು ನಡೆಯಲಿದ್ದು , ಆ ಕಾರ್ಯಕ್ರಮದಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಕೇರಳದ ಸಂಸದ ರಾಜಮೋಹನ ಉಣ್ಣಿತ್ತಾನ್ , ಶಾಸಕರಾದ ಎನ್.ಎ.ನೆಲ್ಲಿಕುನ್ನು, ಸಿ.ಎಚ್.ಕುಂಞಂಬು, ಎ.ಕೆ.ಅಶ್ರಫ್. ಹಿರಿಯ ಸಾಹಿತಿಗಳಾದ ರಮಾನಂದ ಬನಾರಿ ಸಹಿತ ಪ್ರಮುಖರು ಭಾಗವಹಿಸುವ ಸಮಾರಂಭದಲ್ಲಿ ಅಕಾಡೆಮಿಯು ಈ ಬಾರಿಯೂ ವಿವಿಧ ಕ್ಷೇತ್ರಗಳಲ್ಲಿ ಸ್ಮರಣೀಯ ಸೇವೆ ಸಲ್ಲಿಸುತ್ತಿರುವ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಿದೆ.

ಇದೇ ಸಂದರ್ಭದಲ್ಲಿ ಡಾ. ಆರತಿಕೃಷ್ಣ, ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್,  ಪಟ್ಲ ಸತೀಶ್ ಶೆಟ್ಟಿ, ನಂದಳಿಕೆ ನಾರಾಯಣ ಶೆಟ್ಟಿ, ಡಾ. ಜನಾರ್ಧನ ನಾಯಕ್, ನ್ಯಾಯವಾದಿ ಮೊಹಮ್ಮದ್ ಆಸ್ಕರ್, ಗಂಗಾಧರ ಆಳ್ವ ಪೆರಡಾಲ ಹಾಗೂ ವಸಂತ ಆಳ್ವ ತಲೆಕಲ, ಇವರೆಲ್ಲರಿಗೂ ಇದೇ ಸಂದರ್ಭದಲ್ಲಿ  ರಾಜ್ಯೋತ್ಸವ ಪ್ರಶಸ್ತಿ ಪ್ರದಾನವಾಗಲಿದೆ. ನಂತರ ರಾಜ್ಯೋತ್ಸವ ಕವಿಗೋಷ್ಠಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Key words: Shivananda Tagadur – Frontier –Literature-Cultural- Academy- Award.