ಶಿವಮೊಗ್ಗದ ಹರ್ಷ ಹತ್ಯೆ ಪ್ರಕರಣ ತನಿಖೆ ಜವಾಬ್ದಾರಿ ಎನ್‌ಐಎಗೆ: ಸಚಿವೆ ಶೋಭಾ ಕರದ್ಲಾಂಜೆ

Promotion

ಶಿವಮೊಗ್ಗ, ಮಾರ್ಚ್ 06, 2022 (www.justkannada.in): ಕೇಂದ್ರ ಕೃಷಿ ಸಚಿವೆ ಶೋಭಾ ಕರದ್ಲಾಂಜೆ ಇಂದು ಶಿವಮೊಗ್ಗದಲ್ಲಿ ಹತ್ಯೆಗೀಡಾದ ಹರ್ಷ ಮನೆಗೆ ಭೇಟಿ ನೀಡಿದ್ದರು.

ಈ ವೇಳೆ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹರ್ಷನ ಕೊಲೆ ಪ್ರಕರಣವನ್ನು ಶೀಘ್ರವೇ ಎನ್‌ಐಎ ತನಿಖಾ ತಂಡಕ್ಕೆ ನೀಡಲಾಗುವುದು ಎಂದು ಶೋಭಾ ಕರದ್ಲಾಂಜೆ ಇದೇ ವೇಳೆ ತಿಳಿಸಿದರು.

ಬಜರಂಗದಳ ಕಾರ್ಯಕರ್ತ ಹರ್ಷನ ಸಾವಿನ ಹಿಂದೆ ಅಂತರರಾಷ್ಟ್ರೀಯ ಷಡ್ಯಂತ್ರ ಅಡಗಿದೆ ಎಂಬ ಶಂಕೆ ಇದೆ. ಹೀಗಾಗಿ ಪ್ರಕರಣದ ತನಿಖೆಯನ್ನು ಎನ್‌ಐಎ ನೀಡಲಾಗುವುದು ಎಂದು ತಿಳಿಸಿದರು.