ಬಿಹಾರ ವಿಧಾನಸಭಾ ಎಲೆಕ್ಷನ್ ವೇಳೆಯೇ ಶಿರಾ ಕ್ಷೇತ್ರದ ಬೈ ಎಲೆಕ್ಷನ್….

Promotion

ನವದೆಹಲಿ,ಸೆಪ್ಟಂಬರ್,4,2020(www.justkannada.in):   ನವೆಂಬರ್ 29 ರೊಳಗೆ ಬಿಹಾರ ವಿಧಾನಸಭಾ ಚುನಾವಣೆ  ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.  ಇದೇ ವೇಳೆ ಕರ್ನಾಟಕದ  ಶಿರಾ ವಿಧಾನಸಭಾ ಕ್ಷೇತ್ರ ಸೇರಿ 65 ಕ್ಷೇತ್ರಗಳ  ಬೈ ಎಲೆಕ್ಷನ್ ನಡೆಸಲು ಆಯೋಗ ತೀರ್ಮಾನಿಸಿದೆ.jk-logo-justkannada-logo

ದೇಶದಲ್ಲಿ  64 ವಿಧಾನಸಭಾ ಕ್ಷೇತ್ರಗಳು ಮತ್ತು ಒಂದು ಲೋಕಸಭಾ ಕ್ಷೇತ್ರ ಖಾಲಿ ಇದೆ. ಹೀಗಾಗಿ   ಬಿಹಾರ ವಿಧಾನಸಭಾ ಚುನಾವಣೆ ಮತ್ತು  64 ಕ್ಷೇತ್ರಗಳ ವಿಧಾನಸಭೆಗೆ ಮತ್ತು ಒಂದು ಕ್ಷೇತ್ರದ ಲೋಕಸಭೆಗೆ ನವೆಂಬರ್ 29 ರೊಳಗೆ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ. ಅಲ್ಲದೆ ಶೀಘ್ರವೇ ದಿನಾಂಕ ಘೋಷಣೆ ಮಾಡುವುದಾಗಿ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.  ಇನ್ನು ಇದೇ ವೇಳೆಯಲ್ಲೇ ಶಿರಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.shira-constituency-byelection-bihar-assembly-election

ಜೆಡಿಎಸ್ ಶಾಸಕ ಸತ್ಯ ನಾರಾಯಣ್ ಅವರ ನಿಧನದಿಂದ ಶಿರಾ ಕ್ಷೇತ್ರ ತೆರವಾಗಿದ್ದು ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಇನ್ನು ಶಿರಾ ಕ್ಷೇತ್ರದಲ್ಲಿ ಗೆಲುವು ಸಾಧಿಸಲು  ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಭರದಿಂದ ಸಿದ್ಧತೆ ನಡೆಸುತ್ತಿದ್ದಾರೆ.

Key words: Shira- constituency- byelection –Bihar- assembly election