ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟಿಸುತ್ತೇನೆ- ಸಿಎಂ ಬಿಎಸ್ ವೈ ಭರವಸೆ…

Promotion

ತುಮಕೂರು,ಅಕ್ಟೋಬರ್,30,2020(www.justkannada.in): ಮದಲೂರು ಕೆರೆ ತುಂಬಿಸಬೇಕು ಎನ್ನುತ್ತಿದ್ದೀರಿ.  ಇನ್ನು ಆರು ತಿಂಗಳಲ್ಲಿ ಮದಲೂರು ಕೆರೆ ತುಂಬಿಸಿ ನಾನೇ ಉದ್ಘಾಟಿಸುತ್ತೇನೆ ಎಂದು ಮುಖ್ಯಮಂತ್ರಿ  ಬಿ.ಎಸ್ ಯಡಿಯೂರಪ್ಪ ಭರವಸೆ ನೀಡಿದರು.jk-logo-justkannada-logo

ಶಿರಾ ಉಪಚುನಾವಣೆ ಹಿನ್ನೆಲೆ ಮದಲೂರಿನಲ್ಲಿ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಕೆ.ಅರ್. ಪೇಟೆ ಕ್ಷೇತ್ರದಲ್ಲಿ ಗೆಲ್ಲಲ್ಲು ನೀಡಿದ್ದ ಭರವಸೆ ಈಡೇರಿಸಲಾಗಿದೆ. ಅದರಂತೆ ಶಿರಾದಲ್ಲೂ ಈಡೇರಿಸಲಾಗುವುದು. 20-30 ಸಾವಿರ ಅಂತರದಿಂದ ರಾಜೇಶ್ ಗೌಡರನ್ನು ಗೆಲ್ಲಿಸಬೇಕು. ಶಿರಾದಲ್ಲಿ ರಾಜೇಶ್ ಗೌಡರನ್ನ ಗೆಲ್ಲಿಸುವ ಪಣ ತೊಡಲಾಗಿದೆ.  ಯಾವ ಶಕ್ತಿಯೂ ಈ ಗೆಲುವನ್ನ ತಡೆಯಲು ಸಾಧ್ಯವಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. shira –by election- inaugurate - six months – filling- Madalur Lake-CM BS Yeddyurappa

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ಬಿ.ಸದಾನಂದಗೌಡ, ಡಿಸಿಎಂ ಗೋವಿಂದ ಕಾರಜೋಳ, ಸಚಿವ ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಎಂ. ರೇಣುಕಾಚಾರ್ಯ, ಅಭ್ಯರ್ಥಿ ಡಾ.ರಾಜೇಶ್ ಗೌಡ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಉಪಸ್ಥಿತರಿದ್ದರು.

Key words: shira –by election- inaugurate – six months – filling- Madalur Lake-CM BS Yeddyurappa