ಹುಣಸೋಡು ಬಳಿ ಸ್ಪೋಟ ಪ್ರಕರಣ: ಹೈಕೋರ್ಟ್ ನ್ಯಾಯಾಧೀಶರಿಂದಲೇ ತನಿಖೆಯಾಗಲಿ-ಸಿದ್ಧರಾಮಯ್ಯ ಆಗ್ರಹ…. 

Promotion

ಶಿವಮೊಗ್ಗ,ಜನವರಿ,27,2021(www.justkannada.in):  ಶಿವಮೊಗ್ಗ ಜಿಲ್ಲೆಯ ಹುಣಸೋಡು ಬಳಿ ಸಂಭವಿಸಿದ ಜಿಲೆಟಿನ್ ಸ್ಫೋಟ ದುರಂತ ಪ್ರಕರಣದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದಲೇ ತನಿಖೆಯಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.jk

ಶಿವಮೊಗ್ಗದ ಹುಣಸೋಡು ಬಳಿ ಸ್ಪೋಟ ದುರಂತ ಸ್ಥಳಕ್ಕೆ ಮಾಜಿ ಸಿಎಂ ಸಿದ್ಧರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ಬಳಿಕ ಮಾತನಾಡಿದ ಅವರು, ಕಲ್ಲುಗಂಗೂರು ಗ್ರಾಮದ ಸರ್ವೆ ನಂ.02 ನಲ್ಲಿ ಕ್ರಷರ್ ನಡೆಯುತ್ತಿದೆ. ಆ ಜಮೀನು ಕುಲಕರ್ಣಿ ಎಂಬುವರಿಗೆ ಸೇರಿದ್ದು, ಸುಧಾಕರ್ ಲೀಸಿಗೆ ಪಡೆದು ಕ್ರಷರ್ ನಡೆಸುತ್ತಿದ್ದಾರೆ. ಆದರೆ ಈ ಸ್ಥಳದಲ್ಲಿ ಜನವರಿ 21 ರಂದು ಸ್ಫೋಟ ಸಂಭವಿಸಿದೆ ಆದರೂ ಅಧಿಕಾರಿಗಳಿಗೆ ಗೊತ್ತಿಲ್ಲ ಎಂದು  ಹರಿಹಾಯ್ದರು.Shimoga-hunsodu-Explosion case-investigation- High Court- judge-farmer cm-Siddaramaiah

ಸಿಎಂ ಯಡಿಯೂರಪ್ಪ ಹಾಗೂ ಉಸ್ತುವಾರಿ ಸಚಿವರ ಗಮನಕ್ಕೆ ಬರದೇ ಅಕ್ರಮವಾಗಿ ನಡೆಯುತ್ತಿವೆಯೇ..? ಅಕ್ರಮದ ಬಗ್ಗೆ ಯಾರಾದ್ರೂ ಕಾರ್ಯಕರ್ತರೊಬ್ಬರು ಅವರ ಗಮನಕ್ಕೆ ತಂದಿಲ್ಲವೇ..? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು. ಹಾಗೆಯೇ ಪ್ರಕರಣದ ಬಗ್ಗೆ  ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಬೇಕು ಎಂದು ಸಿದ್ಧರಾಮಯ್ಯ ಆಗ್ರಹಿಸಿದರು.

Key words: Shimoga-hunsodu-Explosion case-investigation- High Court- judge-farmer cm-Siddaramaiah