ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿದ್ದು ನಮಗೆ ಪ್ಲಸ್ ಆಗುತ್ತೆ- ಸಿಎಂ ಬಸವರಾಜ ಬೊಮ್ಮಾಯಿ.

Promotion

ದಾವಣಗೆರೆ,ಏಪ್ರಿಲ್,24,2023(www.justkannada.in): ಜಗದೀಶ್ ಶೆಟ್ಟರ್ ಮತ್ತು ಲಕ್ಷ್ಮಣ್ ಸವದಿ ಕಾಂಗ್ರೆಸ್ ಸೇರಿದ್ದು ನಮಗೆ ಪ್ಲಸ್ ಆಗುತ್ತದೆ ಎಂದು ಸಿಎಂ ಬಸರವಾಜ ಬೊಮ್ಮಾಯಿ ತಿಳಿಸಿದ್ದಾರೆ.

ದಾವಣಗೆರೆಯಲ್ಲಿ ಇಂದು ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ,  ರಾಜ್ಯದಲ್ಲಿ ಬಿಜೆಪಿಯಲ್ಲಿ ಶೇ. 90ರಷ್ಟು ಬಂಡಾಯ ಶಮನವಾಗಿದೆ. 18 ರಿಂದಗ 35 ವರ್ಷದೊಳಗಿನ ಯುವಪಡೆ ಬಿಜೆಪಿಗಿದೆ.  ಜನರ ಭಾವನೆಗಳ ಜೊತೆ ಆಟವಾಡುವುದು ಕಾಂಗ್ರೆಸ್ . ನಿನ್ನೆ ಕೂಡಲ ಸಂಗಮಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿದ್ದಾರೆ. ರಾಹುಲ್ ಗಾಂಧಿ ತೋರಿಕೆಗಾದರೂ ಬಸವಣ್ಣನ ದರ್ಶನ ಮಾಡಲಿ ಎಂದು ಲೇವಡಿ ಮಾಡಿದರು.

ಸಿದ್ದರಾಮಯ್ಯ ಲಿಂಗಾಯತ ಹೇಳೀಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಎಂ ಬಸವರಾಜ ಬೊಮ್ಮಾಯಿ,  ಸಿದ್ಧರಾಮಯ್ಯ ಹೇಳಿಕೆಯನ್ನ ಯಾರೂ ತಿರುಚಿಲ್ಲ. ಆದರೆ ಸಿದ್ಧರಾಮಯ್ಯ ಹೇಳಿಕೆ ತಿರುಚಲಾಗಿದೆ ಎಂದು ಹೇಳುತ್ತಿದ್ದಾರೆ. ಸಿದ್ಧರಾಮಯ್ಯ ತನ್ನ ಹೇಳಿಕೆಯನ್ನ ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

Key words: Shettar – Savadi -joining – Congress – plus -bjp-  CM- Basavaraja Bommai.