‘’ಕುರುಬರನ್ನು ಎಸ್‌ಟಿಗೆ ಸೇರಿಸುವ ಹೋರಾಟ ಆರಂಭ ಆಗಿದ್ದೇ ಸಿದ್ದರಾಮಯ್ಯ ಮನೆಯಿಂದ’’ : ಹೊಸದುರ್ಗದ ಶ್ರೀ ಈಶ್ವರಾನಾಂದಪುರಿ ಸ್ವಾಮೀಜಿ…!

ಮೈಸೂರು,ಡಿಸೆಂಬರ್,29,2020(www.justkannada.in) : ಕುರುಬರನ್ನು ಎಸ್‌ಟಿಗೆ ಸೇರಿಸುವ ಹೋರಾಟ ಆರಂಭ ಆಗಿದ್ದೇ ಸಿದ್ದರಾಮಯ್ಯ ಮನೆಯಿಂದ. ನಾನು ಮತ್ತು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಮೊದಲು ಹೋಗಿದ್ದೇ ಸಿದ್ದರಾಮಯ್ಯ ಮನೆಗೆ. ಯಾಕೆಂದರೆ ರಾಜ್ಯದ ಕುರುಬರಿಗೆ ಸಿದ್ದರಾಮಯ್ಯ ಯಜಮಾನ ಎಂದು ಹೊಸದುರ್ಗದ ಶ್ರೀ ಈಶ್ವರಾನಾಂದಪುರಿ ಸ್ವಾಮೀಜಿ ಹೇಳಿದರು.

‘’ಹೋರಾಟದ ಅಗತ್ಯವಿದೆ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದರು’’

ಮೈಸೂರಿನಲ್ಲಿ ಮಾತನಾಡಿದ ಶ್ರೀ ಈಶ್ವರಾನಾಂದಪುರಿ ಸ್ವಾಮೀಜಿ,  ರಾಜ್ಯದ ಕುರುಬರಿಗೆ ಸಿದ್ದರಾಮಯ್ಯ ಯಜಮಾನ. ಹೀಗಾಗಿ, ಯಜಮಾನನ ಮನೆಗೇ ಮೊದಲು ಹೋಗಿದ್ದೆವು.  ಕುರುಬರಿಗೆ ಮೀಸಲಾತಿ ಸೌಲಭ್ಯ ಸಿಗಬೇಕು. ಈ ನಿಟ್ಟಿನಲ್ಲಿ ಹೋರಾಟದ ಅಗತ್ಯವಿದೆ ಅಂತ ಸಿದ್ದರಾಮಯ್ಯ ಅವರೇ ಹೇಳಿದ್ದರು ಎಂದಿದ್ದಾರೆ.shepherds-Adding-ST-Fight-Beginning-Siddaramai-house-hosadurga-Shree Ishwaranandpuri Swamiji

ಯಾರು ಬರಲಿ, ಬಾರದೆ ಇರಲಿ. ನಾವಂತೂ ಹೋರಾಟ ಶುರು ಮಾಡಿದ್ದೇವೆ…!

ಬಳಿಕ ಈಶ್ವರಪ್ಪ ಅವರ ಮನೆಗೆ ಹೋಗಿದ್ದೆವು.  ಹೋರಾಟದಲ್ಲಿ ಸ್ಪಷ್ಟತೆ ಇಲ್ಲದೇ ಇದ್ದರೆ, ಒಗ್ಗಟು ಇಲ್ಲದೇ ಹೋದರೆ ಹೋರಾಟ ಯಶಸ್ವಿಯಾಗದು. ಯಾರು ಬರಲಿ, ಬಾರದೆ ಇರಲಿ. ನಾವಂತೂ ಹೋರಾಟ ಶುರು ಮಾಡಿದ್ದೇವೆ. ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.

 

 

key words : shepherds-Adding-ST-Fight-Beginning-Siddaramai-house-hosadurga-Shree Ishwaranandpuri Swamiji