ಸೆ.21ರಿಂದ ಅಧಿವೇಶನ: ಸ್ವತಃ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೊಳಪಟ್ಟ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ…

Promotion

ಬೆಂಗಳೂರು,ಸೆಪ್ಟಂಬರ್,18,2020(www.justkannada.in):  ರಾಜ್ಯ ವಿಧಾನಮಂಡಲದ ಅಧಿವೇಶನ ಸೆಪ್ಟೆಂಬರ್ 21ರಿಂದ ಆರಂಭವಾಗಿ ಸೆಪ್ಟಂಬರ್ 30ರವರೆಗೆ ನಡೆಯಲಿದ್ದು ಕಲಾಪದಲ್ಲಿ ಭಾಗವಹಿಸುವವರು, ಎಲ್ಲರೂ 72 ಗಂಟೆಗೂ ಮೊದಲು  ಕೊರೋನಾ ಟೆಸ್ಟ್ ಮಾಡಿಸುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ್ದರು. ಈ ನಡುವೆ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ವತಃ ಕೋವಿಡ್ ಟೆಸ್ಟ್ ಗೆ ಒಳಪಟ್ಟು ಸದಸ್ಯರುಗಳೆಲ್ಲರೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಪ್ರೇರೇಪಿಸಿದರು.jk-logo-justkannada-logo

ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುವ 72 ಗಂಟೆ ಮೊದಲು ಎಲ್ಲರೂ ಕೊರೋನಾ ಟೆಸ್ಟ್ ಮಾಡಿಸಿ ಫಲಿತಾಂಶದ ಸಮೇತ ಅಧಿವೇಶನಕ್ಕೆ ಬರಬೇಕು ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೂಚಿಸಿದ ಹಿನ್ನೆಲೆ ಇಂದು ಆರ್.ಟಿ.ಪಿ.ಸಿ.ಆರ್ ಪರೀಕ್ಷೆ ಮಾಡಲು ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ಈ ಮಧ್ಯೆ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ವತಃ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಪಟ್ಟು ಸದಸ್ಯರುಗಳೆಲ್ಲರೂ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ಒಳಗಾಗುವಂತೆ ಪ್ರೇರೇಪಿಸಿದರು. ಜತೆಗೆ ವಿಧಾನ ಸಭೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಸಹ ಆರ್.ಟಿ.ಪಿ.ಸಿ.ಆರ್  ಟೆಸ್ಟ್ ಮಾಡಿಸಿಕೊಳ್ಳುವಂತೆ  ನಿರ್ದೇಶನ ನೀಡಿದರು.Session - Sep. 21-Speaker- Vishweshwara Hegde Kageri- himself –RTPCR test

ಇದೇ ವೇಳೆ ಬ್ಯಾಂಕ್ವೆಟ್ ಹಾಲಿನಲ್ಲಿ ಸಚಿವಾಲಯದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಆರ್.ಟಿ.ಪಿ.ಸಿ.ಆರ್ ಪರೀಕ್ಷೆಗೆ ವ್ಯವಸ್ಥೆ ಮಾಡಿರುವುದನ್ನು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪರಿಶೀಲಿಸಿದರು.

Key words: Session – Sep. 21-Speaker- Vishweshwara Hegde Kageri- himself –RTPCR test