ಸದನದಲ್ಲಿ ಕ್ರಿಯಾಲೋಪ ಚಟಾಪಟಿ: ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರಶ್ನೆಗೆ ಸ್ಪೀಕರ್ ರಮೇಶ್ ಕುಮಾರ್ ಗರಂ…

Promotion

ಬೆಂಗಳೂರು,ಜು,18,2019(www.justkannada.in):  ರಾಜ್ಯ ವಿಧಾನಸಭಾ ಕಲಾಪದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಸ್ತಾಪಿಸಿದ   ಕ್ರಿಯಾಲೋಪ ಬಗ್ಗೆ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಜಟಾಪಟಿ ನಡೆಯುತ್ತಿದೆ.

ಸದನದಲ್ಲಿ ಕ್ರಿಯಾಲೋಪವೆತ್ತಿದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರು ಶೆಡ್ಯುಲ್ 10ರ ಬಗ್ಗೆ ಪ್ರಸ್ತಾಪಿಸಿ ಚರ್ಚಿಸಿದರು. ಈ ವೇಳೆ  ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ  ಶೆಡ್ಯುಲ್ ನ ಜಟಾಪಟಿ  ನಡೆದಿದ್ದು  10ನೇ ಶೆಡ್ಯುಲ್ ಗೂ ಸದನಕ್ಕೂ ಏನು ಸಂಬಂಧ ಎಂದು ಬಿಜೆಪಿ ಶಾಸಕ ಮಾಧುಸ್ವಾಮಿ ಪ್ರಶ್ನಿಸಿದರು.

ಮಾಧುಸ್ವಾಮಿ ಅವರ ಪ್ರಶ್ನೆಗೆ ಗರಂ ಆದ ಸ್ಪೀಕರ್ ರಮೇಶ್ ಕುಮಾರ್ , ವೈಯಕ್ತಿಕವಾಗಿ ನಾನು ವಕೀಲನಲ್ಲ. ನನಗೆ ಕಾಂಗ್ರೆಸ್ ಶಾಸಕಾಂಗ ಪಕ್ಷ ಮುಖ್ಯವಲ್ಲ ಎಂದು ಕಿಡಿಕಾರಿದರು.

ಇನ್ನು ವಿಧಾನಸಭೆಯಲ್ಲಿ ಮಾತನಾಡಿ ಕ್ರಿಯಾಲೋಪ ಆಕ್ಷೇಪಿಸಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಇಲ್ಲಿನ  ಮುಖ್ಯವಾದ ಅಜೆಂಡಾ ವಿಶ್ವಾಸಮತಯಾಚನೆ.  ಸಿದ್ದರಾಮಯ್ಯರಿಂದ ಪಾಂಯಿಂಟ್ ಆಪ್ ಆರ್ಡ್ ರೈಸ್ ಆಗಿದೆ. ಬಳಿಕ ಹೆಚ್.ಕೆ ಪಾಟೀಲ್ ಕೃಷ್ಣೇಭೈರೇಗೌಡ ರಿಂದ ರೈಸ್ ಆಗಿದೆ.  ಒಂದರ ಬಗ್ಗೆ ಸ್ಪಷ್ಟನೆ  ಸಿಗದೆ ಮತ್ತೊಂದು ವಿಷಯ ಪ್ರಸ್ತಾಪವಾಗುತ್ತಿದೆ. ಪಾಯಿಂಟ್ ಆಫ್ ಆರ್ಡರ್ ಗೆ ನೀವೆ ಅವಕಾಶ ನೀಡಿ ಎಂದರು.

Key words: session-Ramesh Kumar -BJP MLA Madhuswamy -Question