ಹಿರಿಯ ನಟ ರವಿ ಪಟವರ್ಧನ್ ಹೃದಯಾಘಾತದಿಂದ ನಿಧನ

Promotion

ಮುಂಬೈ,ಡಿಸೆಂಬರ್,06,2020(www.justkannada.in): ಹಿರಿಯ ನಟ ರವಿ ಪಟವರ್ಧನ್ ಅವರು ತಮ್ಮ 83ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದರು.

logo-justkannada-mysore

ಉಸಿರಾಟದ ತೊಂದರೆಯಿಂದ ಶನಿವಾರ(ಡಿಸೆಂಬರ್ 5) ನಟನನ್ನು ಮುಂಬೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಮಾರ್ಚ್ ನಲ್ಲಿ ಹಿರಿಯ ನಟ ರವಿ ಪಟವರ್ಧನ್ ಹೃದಯಾಘಾತವಾಗಿ ಚೇತರಿಸಿಕೊಂಡಿದ್ದರು. ಆದರೆ, ರಾತ್ರಿ ಮತ್ತೊಮ್ಮೆ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಈ ಕುರಿತಂತೆ ನಟ ರವಿ ಪಟವರ್ಧನ್ ಪುತ್ರ ನಿರಂಜನ್ ಮಾಹಿತಿ ನೀಡಿದ್ದು, ರವಿ ಪಟವರ್ಧನ್ ಅವರಿಗೆ ಉಸಿರಾಟದ ತೊಂದರೆ ಯಾದ ಹಿನ್ನೆಲೆಯಲ್ಲಿ ಥಾಣೆಯ ಜುಪಿಟರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ನಿನ್ನೆ ರಾತ್ರಿ 9-9.30ರ ಸುಮಾರಿಗೆ ಹೃದಯಾಘಾತದಿಂದ ಅವರು ನಿಧನರಾದರು.

Senior,actor,Ravi Patawardhan,heart attack,Died

ಉಸಿರಾಟದ ತೊಂದರೆಯಿಂದ ಮನೆಯಲ್ಲಿ ಮೂರ್ಛೆ ಹೋಗಿದ್ದರಿಂದ ಕೂಡಲೇ ಆಸ್ಪತ್ರೆಗೆ ಕರೆದೊಯ್ದೆವು. ಆಸ್ಪತ್ರೆಗೆ ತೆರಳಿದ ಅರ್ಧ ಗಂಟೆಯೊಳಗೆ ನಾವು ಅವರನ್ನು ಕಳೆದುಕೊಂಡೆವು’ ಎಂದು ತಿಳಿಸಿದ್ದಾರೆ.

key words : Senior-actor-Ravi Patawardhan-heart attack-Died