ಚಹಾ ಮಾರಿಕೊಂಡಾದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ- ರಾಜ್ಯ ಕಾಂಗ್ರೆಸ್​ ಗೆ  ಟಾಂಗ್ ಕೊಟ್ಟ ಶಾಸಕ ಯತ್ನಾಳ್.

Promotion

ಬೆಂಗಳೂರು, ನವೆಂಬರ್ 18,2023(www.justkannada.in): ಬಿಜೆಪಿ ಕಚೇರಿ ಶ್ರೀಮಂತರ ಚಹಾ ಹೋಟೆಲ್, ಇಲ್ಲಿ ಬಡವರ ಚಹಾ ಸಿಗಲ್ಲ’ ಎಂದು ಟ್ವೀಟ್ ಮಾಡಿ ಲೇವಡಿ ಮಾಡಿದ್ದ ರಾಜ್ಯ ಕಾಂಗ್ರೆಸ್​​ ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವಿಟ್ಟರ್ ನಲ್ಲೇ ಟಾಂಗ್ ನೀಡಿದ್ದಾರೆ.

ಈ ಕುರಿತು ಟ್ವಿಟ್ ಮಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ‘ಹೇ ಪ್ರಭು! ಚಹಾ ಮಾರಿಕೊಂಡು ಆದರೂ ಬದುಕಬಹದು, ನಿಮ್ಮಂತೆ ಬದುಕು ಮಾರಿಕೊಂಡು ಅಲ್ಲ!’ ಎಂದು ಟಾಂಗ್ ನೀಡಿದ್ದಾರೆ.

ನಿನ್ನೆ ಬೆಂಗಳೂರಿನಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ  ನಡೆದು ಆರ್. ಅಶೋಕ್ ಅವರನ್ನು ವಿಧಾನಸಭೆಯ ಪ್ರತಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು. ಉತ್ತರ ಕರ್ನಾಟಕ ಭಾಗಕ್ಕೆ ಪ್ರಾತಿನಿಧ್ಯ ನೀಡುವಂತೆ ಆಗ್ರಹಿಸಿ ನಿನ್ನೆ ಸಭೆಗೂ ಮುನ್ನ ಹೊರಬಂದಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದು ಬಡವರು ಚಹ ಕುಡಿಯವ ಸ್ಥಳ ಅಲ್ಲ. ಹೊರಗಡೆ ಚಹ ಕುಡಿಯಲು ಬಂದಿದ್ದೇನೆ ಎಂದಿದ್ದರು.

Key words: selling- tea – life –MLA Basanagowda patil Yatnal – Congress.