ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರ: ಯಾರ ಪರವಾಗಿಯೂ ನಾನು ಮಾತನಾಡಲ್ಲ – ಶಾಸಕ ಎಲ್ . ನಾಗೇಂದ್ರ…

Promotion

ಮೈಸೂರು,ಫೆಬ್ರವರಿ,12,2021(www.justkannada.in):  ಮೈಸೂರು ಮೇಯರ್ ಉಪಮೇಯರ್  ಚುನಾವಣೆ ಮೀಸಲಾತಿ ಪ್ರಕಟವಾಗಿದ್ದು ಈ  ನಡುವೆ ಮೇಯರ್ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ನನ್ನ ವೈಯಕ್ತಿಕ ನಿರ್ಧಾರ ಇಲ್ಲ ಎಂದು ಬಿಜೆಪಿ ಶಾಸಕ ಎಲ್. ನಾಗೇಂದ್ರ ತಿಳಿಸಿದ್ದಾರೆ.jk

ಮೈಸೂರು ಮಹಾನಗರ ಪಾಲಿಕೆ ಮೇಯರ್ ಅಭ್ಯರ್ಥಿ ಆಯ್ಕೆ ಕುರಿತು ಪ್ರತಿಕ್ರಿಯಿಸಿದ ಶಾಸಕ ಎಲ್ ನಾಗೇಂದ್ರ, ನಾನು ಯಾರನ್ನೂ ಮೇಯರ್ ಮಾಡಿ ಅಂತ ಹೇಳುವುದಿಲ್ಲ. ಬಿಜೆಪಿ ಸದಸ್ಯರನ್ನ ಮೇಯರ್ ಮಾಡಬೇಕೆನ್ನುವುದು ನಮ್ಮ ಆಸೆ. ಯಾರ ಪರವಾಗಿಯೂ ನಾನು ಮಾತನಾಡುವುದಿಲ್ಲ ಎಂದು ತಿಳಿಸಿದ್ದಾರೆ. selecting –mayor- candidate-MLA L. Nagendra.

ಹೈಕಮಾಂಡ್ ಮತ್ತು ಜಿಲ್ಲಾ ಮಂತ್ರಿಗಳ ನಿರ್ಧಾರಕ್ಕೆ ನಾವೆಲ್ಲ ಬದ್ದರಾಗಿದ್ದೇವೆ. ನಮ್ಮ ಮೈಸೂರು ನಗಾರಧ್ಯಕ್ಷರು, ಸಂಸದರು ಶಾಸಕರಿದ್ದಾರೆ ಅವರೆಲ್ಲರ ಜೊತೆ ಚರ್ಚೆ ಮಾಡಲಿದ್ದೇವೆ. ಕೋರ್ ಕಮಿಟಿಯಲ್ಲಿ ಸಾಧಕ ಭಾದಕಗಳ ಚರ್ಚೆ ಮಾಡುವ ಮೂಲಕ ಅಭ್ಯರ್ಥಿ ಆಯ್ಕೆ ಮಾಡಲಿದ್ದೇವೆ. ನಾಳೆ ನಾಡಿದ್ದು ಸಭೆ ಮಾಡಿ ತೀರ್ಮಾನ ಕೈಗೊಳ್ಳುತ್ತೇವೆ.

Key words: selecting –mayor- candidate-MLA L. Nagendra.