ಫಿಟ್ನೆಸ್​ ಫ್ರೀಕ್​ ದೂಧ್​ ಪೇಡಾ ದಿಗಂತ್ ನೋಡಿ !

Promotion

ಬೆಂಗಳೂರು, ಮಾರ್ಚ್ 14, 2020 (www.justkannada.in): ಸ್ಯಾಂಡಲ್​ವುಡ್​ ದೂಧ್​ ಪೇಡಾ ದಿಗಂತ್​ ಎಲ್ಲಿದ್ದೀಯಪ್ಪಾ ಅಂತ ನಿನ್ನೆಯಷ್ಟೆ ನೆಟ್ಟಿಗರು ಕೇಳಿದ್ದರು. ಅದಕ್ಕೆ ಸರಿಯಾಗಿ ದಿಗಂತ್​ ಎಲ್ಲಿದ್ದಾರೆ ಅಂತ ಈ ವಿಡಿಯೋ ಹೇಳುತ್ತಿದೆ!

ಬಿಡುವಿನಲ್ಲಿರುವ ದಿಗಂತ್​ ಈಗ ಕಂಪ್ಲೀಟ್​ ಫಿಟ್ನೆಸ್​ ಫ್ರೀಕ್​ ಆಗಿದ್ದಾರೆ. ವಾಲ್​ ಫ್ಲಿಪ್​ ಮಾಡುತ್ತಾ ಸಮಯ ಕಳೆಯುತ್ತಿದ್ದಾರೆ. ಈ ವಿಡಿಯೋವನ್ನು ದಿಗಂತ್ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಟ ದಿಗಂತ್​ ಸದ್ಯ ಸಿನಿಮಾಗಳಲ್ಲಿ ಕಡಿಮೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

ದಿಗಂತ್ ಸದ್ಯ ಯೋಗರಾಜ್​ ಭಟ್​ ಅವರ ‘ಗಾಳಿಪಟ 2’ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​ ಸಹ ಅಭಿನಯಿಸುತ್ತಿದ್ದಾರೆ.