ಮಾಜಿ ಸಚಿವರಿಗೆ ನೀಡಿದ್ದ ಭದ್ರತೆ ವಾಪಸ್ : ಬೆಂಗಳೂರು ಪೊಲೀಸ್ ಆಯುಕ್ತರಿಂದ ಆದೇಶ..

Promotion

ಬೆಂಗಳೂರು,ಜ,30,2020(www.justkannada.in): ರಾಜ್ಯದಲ್ಲಿ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಭದ್ರತೆಯನ್ನ ವಾಪಸ್ ಪಡೆಯಲಾಗಿದೆ. ಈ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.

ಈ ಬಗ್ಗೆ ಜನವರಿ 22 ರಂದೇ ಆದೇಶ ಹೊರಡಿಸಲಾಗಿದ್ದು ಎ. ಶ್ರೇಣಿ ಮತ್ತು ಬಿ ಶ್ರೇಣಿ ಎಂದು ಪ್ರತ್ಯೇಕಿಸಿ ಬಿ ಶ್ರೇಣಿಯ 27 ಮಾಜಿ ಸಚಿವರಿಗೆ ನೀಡಲಾಗಿದ್ದ ಭದ್ರತೆ ವಾಪಸ್ ಪಡೆಯಲಾಗಿದೆ. ಮಾಜಿ ಸಚಿವರಾದ ಆರ್ ವಿ ದೇಶಪಾಂಡೆ, ಜಿಟಿ ದೇವೇಗೌಡ, ರಮೇಶ್ ಜಾರಕಿಹೊಳಿ, ಬಂಡೆಪ್ಪ ಕಾಶೆಂಪೊರ್ ಸೇರಿದಂತೆ 27 ಶಾಸಕರಿಗೆ  ನೀಡಿದ್ದಂತ ಅಂಗರಕ್ಷಕ ಮತ್ತು ಭದ್ರತೆಯನ್ನು ಹಿಂಪಡೆದಿದೆ.

ಇನ್ನು ಎ ಶ್ರೇಣಿಯಲ್ಲಿ ಇರುವಂತಹ ಮಾಜಿ ಸಚಿವ ಡಿ.ಕೆ ಶಿವಕುಮಾರ್ , ಕೆಜೆ ಜಾರ್ಜ್, ಡಾಜಿ.ಪರಮೇಶ್ವರ್, ಹೆಚ್.ಡಿ ರೇವಣ್ಣ ಸೇರಿ ಐವರು ಮಾಜಿ ಸಚಿವರ ಭದ್ರತೆ ಯಥಾಸ್ಥಿತಿ ಮುಂದುವರೆಯಲಿದೆ.

Key words: Security -returned – former minister- Order – Bangalore- Police Commissioner