ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಬೆಳೆಸಿರುವ ಕೂಸು ಎಸ್ ಡಿಪಿಐ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ.

Promotion

ಹುಬ್ಬಳ್ಳಿ,ಮೇ,28,2022(www.justkannada.in): ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ರು ಬೆಳೆಸಿದ ಕೂಸು ಎಸ್ ಡಿ ಪಿ ಐ, ಪಿಎಫ್ ಐಗಳು. ಎಸ್ ಡಿ ಪಿ ಐ ಸಂಘಟನೆಯ ಹಿಂದೆ ಕಾಂಗ್ರೆಸ್ ನಾಯಕರ ಬೆಂಬಲವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಮಾತನಾಡಿದ ಪ್ರಹ್ಲಾದ್ ಜೋಶಿ, ಪಿಎಫ್ ಐ. ಎಸ್ ಡಿ ಪಿ ಐಗೆ ಕಾಂಗ್ರೆಸ್ ಕುಮ್ಮಕ್ಕಿದೆ. ಸಿದ‍್ಧರಾಮಯ್ಯ ಸಿಎಂ ಆಗಿದ್ದಾಗ ಎಸ್ ಡಿಪಿಐ ಮೇಲಿನ ಕೇಸ್ ಗಳನ್ನ ವಜಾ ಮಾಡಿದ್ದರು. ಇದು ತುಷ್ಟೀಕರಣದ ಪರಾಕಾಷ್ಠೆ ಎಂದು ಲೇವಡಿ ಮಾಡಿದರು.amit-shahs-visit-cabinet-expansion-union-minister-prahlad-joshi

ಸಿದ್ದರಾಮಯ್ಯಗೆ ನೆಲೆ ಇಲ್ಲ ಕಾಂಗ್ರೆಸ್ ಮೂಲ ಇಟಾಲಿಯದ್ದು.  ಆರ್ ಎಸ್ ಎಸ್ ಬಿಜೆಪಿ ಮೂಲ ಕೇಳುತ್ತಿರುವ ಸಿದ್ಧರಾಮಯ್ಯರ ಮೂಲವನ್ನ ಜನರು ಕಿತ್ತುಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

Key words: SDPI – Congress –Communists- Union Minister -Prahlad Joshi.