ಬೆಂಗಳೂರಿನಲ್ಲಿ ಸೋಮವಾರದಿಂದ ಬಹುತೇಕ ಶಾಲೆಗಳು ಓಪನ್- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

Promotion

ಬೆಂಗಳೂರು,ಜನವರಿ,28,2022(www.justkannada.in):  ಬೆಂಗಳೂರಿನಲ್ಲಿ ಸೋಮವಾರದಿಂದ ಬಹುತೇಕ ಶಾಲೆಗಳು  ತೆರೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಶಾಲೆ ಆರಂಭ ಕುರಿತು ಮಾತನಾಡಿದ ಸಚಿವ ಬಿಸಿ ನಾಗೇಶ್, ಶಾಲೆ ಪುನಾರಂಭ ಕುರಿತು ತಾಂತ್ರಿಕ ಸಲಹ ಸಮಿತಿ ಈಗಾಗಲೇ ಸರ್ಕಾರಕ್ಕೆ ವರದಿ ನೀಡಿದೆ.   1ರಿಂದ 9 ನೇ ತರಗತಿವರೆಗ ಒಪನ್ ಆಗಲಿದೆ ಶಾಲೆ  ಬೆಂಗಳೂರಿನಲ್ಲಿ ಸೋಮವಾರದಿಂದ ಬಹುತೇಕ್ ಶಾಲೆ ಓಪನ್ ಆಗಲಿವೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಒಮಿಕ್ರಾನ್ ಮತ್ತು ಕೊರೋನಾ 3ನೇಯಿಂದಾಗಿ ಶಾಲಾಕಾಲೇಜುಗಳನ್ನ ಬಂದ್ ಮಾಡಲಾಗಿತ್ತು. ನಂತರ ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಶಾಲೆ ಪುನಾರಂಭಿಸಲು ಅವಕಾಶ ನೀಡಲಾಗಿತ್ತು. ಇದೀಗ ಸೋಮವಾರದಿಂದ ರಾಜ್ಯ ರಾಜಧಾನಿಯಲ್ಲೂ ಶಾಲೆಗಳು ತೆರೆಯಲಿವೆ.

Key words: schools –Bangalore-Minister- BC Nagesh