ಆ.23ರೊಳಗೆ ಎಲ್ಲಾ ಶಿಕ್ಷಕರಿಗೆ ವ್ಯಾಕ್ಸಿನ್: ಶಾಲೆ ಆರಂಭಕ್ಕೆ ಇಂದೇ ಮಾರ್ಗಸೂಚಿ- ಶಿಕ್ಷಣ ಸಚಿವ ಬಿ.ಸಿ ನಾಗೇಶ್.

Promotion

ಬೆಂಗಳೂರು,ಆಗಸ್ಟ್,16,2021(www.justkannada.in): ಆಗಸ್ಟ್ 23 ರಿಂದ ಶಾಲಾ ಕಾಲೇಜು ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿಕೊಂಡಿದ್ದು ಇಂದೇ ಮಾರ್ಗಸೂಚಿ ಬಿಡುಗಡೆ ಮಾಡುವುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

ಈ ಕುರಿತು ಇಂದು ವಿಧಾನಸೌಧದಲ್ಲಿ -ಮಾಧ್ಯಮಗಳ ಜತೆ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್,  ಆಗಸ್ಟ್ 23ರ ಒಳಗೆ ಎಲ್ಲ ಶಿಕ್ಷಕರಿಗೆ ವ್ಯಾಕ್ಸಿನ್ ಹಾಕಿಸಲು ಸೂಚನೆ ನೀಡಲಾಗಿದೆ. ಶೇ.80 ರಷ್ಟು ಎಲ್ಲ ಕಡೆಯೂ ವ್ಯಾಕ್ಸಿನ್ ಆಗಿದೆ. ಕೆಲ ತಾಲೂಕುಗಳಲ್ಲಿ ಶೇ.100 ವ್ಯಾಕ್ಸಿನ್ ಆಗಿದೆ. ಇನ್ನು ಶಾಲೆಗಳ ಆರಂಭಕ್ಕೆ ಇಂದೇ ಮಾರ್ಗಸೂಚಿ ಹೊರಡಿಸ್ತೇವೆ ಎಂದು ಹೇಳಿದರು.

ಶೇ.2ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಕಡೆ ಮಾತ್ರ ಶಾಲೆಗಳನ್ನು ಆರಂಭಿಸಲಾಗುತ್ತದೆ. ಮಕ್ಕಳಿಗೆ ಹಾಜರಾತಿ ಕಡ್ಡಾಯ ಮಾಡಿಲ್ಲ. ಸೋಂಕು ಪತ್ತೆಯಾದರೆ ಅಂತಹ ಶಾಲೆಗಳನ್ನ ಕ್ಲೋಸ್ ಮಾಡುತ್ತೇವೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ಜೊತೆ ಒಂದು ಸುತ್ತು ಮಾತುಕತೆ ಆಗಿದೆ. ಯಾವುದನ್ನೂ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೇರುವುದಕ್ಕೆ ಆಗಲ್ಲ. ಆದರೆ ಪೋಷಕರನ್ನು ಗ್ರಾಹಕರ ತರ ನೋಡಬೇಡಿ ಅಂತ ಹೇಳಿದ್ದೇನೆ. ಸರ್ಕಾರದ ನಿಯಮಗಳನ್ನು ಎಷ್ಟರ ಮಟ್ಟಿಗೆ ಜಾರಿಗೆ ತರಬಹುದೋ ತಂದಿದ್ದೇವೆ. ಸರ್ಕಾರ ವಿದ್ಯಾರ್ಥಿಗಳು, ಪೋಷಕರ ಪರವಾಗಿಯೇ ನಿಂತಿದ್ದೇವೆ. ಎಲ್ಲೆಲ್ಲಿ ಪೋಷಕರಿಗೆ ಸಮಸ್ಯೆ ಆಗಿದೆಯೋ ಅಲ್ಲಲ್ಲಿ ಸರ್ಕಾರದ ಚೌಕಟ್ಟಿನಲ್ಲಿ ಕಾನೂನು ಕ್ರಮ ಜರುಗಿಸಿದ್ದೇವೆ ಎಂದು ಸಚಿವ ಬಿಸಿ ನಾಗೇಶ್ ತಿಳಿಸಿದರು.

Key words: school-start- Vaccine -all teachers -Guidelines -Education Minister- BC Nagesh