ಆಗಸ್ಟ್ 2ನೇ ವಾರದವರೆಗೆ ಶಾಲೆ ಆರಂಭ ಸೂಕ್ತವಲ್ಲ- ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ.

ಬೆಂಗಳೂರು,ಆಗಸ್ಟ್,3,2021(www.justkannada.in):  ಇತ್ತೀಚೆಗೆ ಪಕ್ಕದ ಮಹಾರಾಷ್ಟ್ರ,ಕೇರಳ ರಾಜ್ಯದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಗಸ್ಟ್ 2ನೇ ವಾರದವರೆಗೆ ಶಾಲೆ ಆರಂಭ ಸೂಕ್ತವಲ್ಲ ಎಂದು ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ.

ಜುಲೈ 30 ರಂದು ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಸಿ ಕೆಲ ನಿರ್ಣಯಗಳನ್ನ ಕೈಗೊಂಡಿದೆ ಎನ್ನಲಾಗಿದೆ. ಕೊರೋನಾ 3ನೇ ಅಲೆ ಭೀತಿ ಪಕ್ಕದ ರಾಜ್ಯಗಳಲ್ಲಿ ಸೋಂಕು ಉಲ್ಬಣವಾಗುತ್ತಿರುವ ಹಿನ್ನೆಲೆ ಆಗಸ್ಟ್ 16ರವರೆಗೆ  ಶಾಲೆ ತೆರೆಯುವುದು ಬೇಡ. ಆಗಸ್ಟ್ 16ರವರೆಗೂ ಕೆಲ ಹೊಸ ನಿರ್ಬಂಧಗಳನ್ನ ವಿಧಿಸುವಂತೆ ಸಲಹೆ ನೀಡಿದೆ.

ಅಲ್ಲದೆ ರಾಜ್ಯದಲ್ಲಿ ಕೆಲ ನಿರ್ಬಂಧಗಳ ಜಾರಿ ಅಗತ್ಯವಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಮಂಜುನಾಥ್ ತಿಳಿಸಿದ್ದಾರೆ. ಇನ್ನು ಕೇರಳ, ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರಾಜ್ಯದಲ್ಲಿ ಮುನ್ನೆಚರಿಕಾ ಕ್ರಮಗಳನ್ನ ಕೈಗೊಳ್ಳಲಾಗುತ್ತಿದ್ದು ಗಡಿಭಾಗಗಳಲ್ಲಿ ತಪಾಸಣೆ ನಡೆಸಿ ಕೋವಿಡ್ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರಾಜ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ.

ENGLISH SUMMARY….

COVID technical committee suggests State Govt. not suitable to commence schools till 2nd week of August
Bengaluru, August 3, 2021 (www.justkannada.in): The number of new COVID cases in the neighboring Maharashtra and Kerala states is increasing, causing an alarm in Karnataka. Meanwhile, the technical advisory committee to the government has advised the State Government not to commence schools till the second week of August.
It is learnt that the technical advisory committee has arrived at several decisions on July 30. Accordingly, it has advised the State government that it is not suitable to commence schools till August 16 and has also suggested imposing new rules in the State till then.
Keywords: COVID/ Technical Advisory Committee/ State Government/ neighbouring states/ alarm/ schools/ commencing/ not suitable

Key words: School- start – not -until – 2nd week – August-Technical Advisory Committee – Government.