ಗಣೇಶಮೂರ್ತಿ ಪಕ್ಕದಲ್ಲಿ ಸಾವರ್ಕರ್ ಫೋಟೊ ಇಡಿ- ಪ್ರಮೋದ್ ಮುತಾಲಿಕ್ ಕರೆ.

Promotion

ಬೆಂಗಳೂರು,ಆಗಸ್ಟ್,18,2022(www.justkannada.in):  ರಾಜ್ಯದಲ್ಲಿ ವಿ.ಡಿ ಸಾವರ್ಕರ್  ಅವರ ಬ್ಯಾನರ್ ವಿವಾದ ಮತ್ತಷ್ಟು ಹೆಚ್ಚಾಗಿದ್ದು, ಗೌರಿಗಣೇಶ ಹಬ್ಬದ ವೇಳೆ ಗಣೇಶಮೂರ್ತಿ ಪಕ್ಕದಲ್ಲಿ ಸಾವರ್ಕರ್ ಫೋಟೊ ಇಡುವಂತೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.

ಆಗಸ್ಟ್ 15ರಂದು ಶಿವಮೊಗ್ಗದಲ್ಲಿ ಕಿಡಿಗೇಡಿಗಳು  ವಿ.ಡಿ ಸಾವರ್ಕರ್ ಫೋಟೊವನ್ನ ತೆರವುಗೊಳಿಸಿದ ಬಳಿಕ  ಗಲಭೆಗಳು ಉಂಟಾಗಿತ್ತು. ಈ ನಂತರ  ಮುಸ್ಲೀಂ ಏರಿಯಾದಲ್ಲಿ ಸಾವರ್ಕರ್ ಫೋಟೊ ಯಾಕೆ ಇಡಬೇಕಿತ್ತು ಎಂಬ ಸಿದ್ಧರಾಮಯ್ಯ  ಹೇಳಿಕೆ ಸಾಕಷ್ಟು ಸದ‍್ಧು ಮಾಡಿ ಬಿಜೆಪಿ ನಾಯಕರು ಈ ಹೇಳಿಕೆಯನ್ನ ಖಂಡಿಸಿ ತಿರುಗೇಟು ನೀಡಿದ್ದರು. ಕೆಲವು ಕಡೆಗಳಲ್ಲಿ ಸಾವರ್ಕರ್ ಬ್ಯಾನರ್ ಹರಿದು ಹಾಕಿದ್ಧ ಘಟನೆಗಳೂ ಜರುಗಿದ್ದವು.

ಈ ಘಟನೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಪ್ರಮೋದ್ ಮುತಾಲಿಕ್,  ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೊ ಇಡ್ತೀವಿ. ನಿಮಗೆ ತಾಕತ್ ಇದ್ದರೇ ತಡೆಯಿರಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಅಲ್ಲದೆ  ಗಣೇಶಮೂರ್ತಿಯನ್ನ ಪ್ರತಿಷ್ಟಾಪಿಸಿ ಹಿಂದೂಗಳ ದೇಶಭಕ್ತಿ ತೋರಿಸುತ್ತೇವೆ.  ಕಾಂಗ್ರೆಸ್ ಮುಸ್ಲಿಂಮರಿಗೆ ಮುಖಕ್ಕೆ ಹೊಡೆದಂತೆ ಮಾಡ್ತೇವೆ ಎಂದು ಪ್ರಮೋದ್ ಮುತಾಲಿಕ್ ತಿಳಿಸಿದ್ದಾರೆ.

Key words: Savarkar- photo – Ganesha festival-Pramod Muthalik.