ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಚಾಂಪಿಯನ್‌

Promotion

ರಾಜ್‌ಕೋಟ್‌, ಮಾರ್ಚ್ 14, 2020 (www.justkannada.in): ಸೌರಾಷ್ಟ್ರ ತಂಡ ರಣಜಿ ಟ್ರೋಫಿ ಕ್ರಿಕೆಟ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ.

ತವರಿನ ರಾಜ್‌ಕೋಟ್‌ ಅಂಗಳದಲ್ಲಿ ಬಂಗಾಲ ವಿರುದ್ಧ ಪ್ರಥಮ ಇನ್ನಿಂಗ್ಸ್‌ ಮುನ್ನಡೆಯ ಆಧಾರದಲ್ಲಿ ಮೊದಲ ಬಾರಿಗೆ ರಣಜಿ ಕಿರೀಟ ಧರಿಸಿ ಇತಿಹಾಸ ನಿರ್ಮಿಸಿತು.

ಸೌರಾಷ್ಟ್ರದ 425 ರನ್ನುಗಳ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಬಂಗಾಲ 381ಕ್ಕೆ ತನ್ನ ಹೋರಾಟವನ್ನು ಮುಗಿಸಿತು. ಪಂದ್ಯಕ್ಕೆ ಡ್ರಾ ಮುದ್ರೆ ಬೀಳುವಾಗ ಸೌರಾಷ್ಟ್ರ ದ್ವಿತೀಯ ಸರದಿಯಲ್ಲಿ 4 ವಿಕೆಟಿಗೆ 105 ರನ್‌ ಗಳಿಸಿತ್ತು.

ಸೌರಾಷ್ಟ್ರ ಕಳೆದ ವರ್ಷದ ಫೈನಲ್‌ನಲ್ಲಿ ವಿದರ್ಭಕ್ಕೆ ಶರಣಾಗಿತ್ತು. ಇದಕ್ಕೂ ಹಿಂದೆ 2 ಸಲ ಮುಂಬಯಿ ವಿರುದ್ಧ ಎಡವಿತ್ತು.