ಮೈಸೂರಿನಲ್ಲಿ ಮೈಗ್ರಾಪದಿಂದ ಜ.29 ರಂದು ಉತ್ತಮ ಆಡಳಿತಕ್ಕಾಗಿ ಸತ್ಯಾಗ್ರಹ: ಎಲ್ಲರೂ ಪಾಲ್ಗೊಳ್ಳುವಂತೆ ಮನವಿ.

kannada t-shirts

ಮೈಸೂರು,ಜನವರಿ,24,2023(www.justkannada.in): ಮೈಸೂರು ಗ್ರಾಹಕ ಪರಿಷತ್ ವತಿಯಿಂದ ಜನವರಿ 29 ರಂದು ಉತ್ತಮ ಆಡಳಿತಕ್ಕಾಗಿ ಸತ್ಯಾಗ್ರಹ ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ.

ಮೈಸೂರಿನ ಪ್ರತಿಯೊಬ್ಬರೂ (ಅಗತ್ಯ ಸೇವೆಗಳಿಗೆ ಬೇಕಾದ ವೈದ್ಯರು, ನರ್ಸ್  ಗಳು ಮತ್ತು ಪೊಲೀಸರನ್ನು ಹೊರತುಪಡಿಸಿ) ಜನವರಿ 29  ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಯಾವ ವಾಹನಗಳನ್ನೂ ಬಳಸುವುದನ್ನು ನಿಲ್ಲಿಸಬೇಕು. ಈ ಅವಧಿಯಲ್ಲಿ ಅವರು ಶಾಪಿಂಗ್ ಮಾಡಬಾರದು ಮತ್ತು ರೆಸ್ಟೋರೆಂಟ್ ಗಳಿಗೆ ಭೇಟಿ ನೀಡಬಾರದು (ಸಾಂಕ್ರಾಮಿಕ ಕಾಲದಲ್ಲಿ ಸ್ವಯಂ ವಿಧಿಸಿಕೊಂಡ ಲಾಕ್ ಡೌನ್ ನಂತೆ). ಅವರು ಉದ್ಯಾನವನಗಳಿಗೆ ಭೇಟಿ ನೀಡಬಹುದು ಅಥವಾ ನಡೆದಾಡಬಹುದು. ವಾಸ್ತವವಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡವರು ಉದ್ಯಾನವನಗಳಲ್ಲಿ ಒಂದೆಡೆ ಸೇರಿ ಒಂದು ಅಥವಾ ಎರಡು ಗಂಟೆಗಳಷ್ಟು ಮೌನವಾಗಿ ಸತ್ಯಾಗ್ರಹದಲ್ಲಿ ಕುಳಿತುಕೊಳ್ಳಬೇಕು ಈ ರೀತಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳುವಂತೆ ಮೈಸೂರು ಜನತೆ ಮೈಗ್ರಾಪ ಮನವಿ ಮಾಡಿದೆ.

ಸತ್ಯಾಗ್ರಹದ ಬಹು ಮುಖ್ಯ ಅವಶ್ಯಕತೆಯೆಂದರೆ ಆ ದಿನದಂದು ವಾಣಿಜ್ಯ ಚಟುವಟಿಕೆಗಳನ್ನು ಮಾಡದಿರುವುದು. ನಗರದ ವಿವಿಧ ಭಾಗಗಳಲ್ಲಿ, ಆದ್ಯತೆಯಾಗಿ ಉದ್ಯಾನವನಗಳಲ್ಲಿ, “ನಾಗರಿಕ ಸಮಸ್ಯೆಗಳ ಬಗ್ಗೆ ಆಸಕ್ತಿ ವಹಿಸುವುದು ಹೇಗೆ’ ಎಂಬ ಕುರಿತು, ಭಾಗವಹಿಸುವವರು ತಮ್ಮ ಕುಂಟುಂಬದವರೊಡನೆ ಅಥವಾ ಒಂದು ಗುಂಪು ರಚಿಸಿ ಅದರೊಡನೆ ಚಟುವಟಿಕೆಗಳನ್ನು ಆಯೋಜಿಸಬಹುದು.

ಇತರೆ ಪ್ರತಿಭಟನೆಗಳಂತೆ ಸಂಘಟಕರು ಯಾವುದೇ ಅಂಗಡಿಗಳನ್ನು ಅಥವಾ ರೆಸ್ಟೋರೆಂಟ್ ಗಳನ್ನು ಮುಚ್ಚಲು ಹೇಳುವುದಿಲ್ಲ. ಇದರಲ್ಲಿ ಭಾಗವಹಿಸುವಿಕೆ ಸಂಪೂರ್ಣ ಸ್ವಯಂಪ್ರೇರಿತವಾಗಿದ್ದು, ಇದೇ ನಿಜವಾದ ಜನರ ಚಳುವಳಿ. ವಿವಿಧ ಹಂತಗಳಲ್ಲಿ ಭಾಗವಹಿಸುವ ಎಲ್ಲರಿಂದ ಸ್ವಲ್ಪ ತ್ಯಾಗವನ್ನು ನಿರೀಕ್ಷಿಸಲಾಗಿದೆ. ಪ್ರಸ್ತಾಪಿಸಿದ ಸತ್ಯಾಗ್ರಹವು ನಮ್ಮ ಸಂವಿಧಾನದಲ್ಲಿ ಕಲ್ಪಿಸಿದಂತೆ ಪ್ರಜಾಪ್ರಭುತ್ವದಲ್ಲಿ ನಾಗರಿಕ ಭಾಗವಹಿಸುವಿಕೆಯ ಒಂದು ಹೊಸ ಯುಗವನ್ನು ಪ್ರಾರಂಭಿಸಬಹುದು. ನಾಗರಿಕರ ಭಾಗವಹಿಸದಿರುವಿಕೆಯ ಕಾರಣದಿಂದ ಮತ್ತು “ಚಲ್ತಾ ಹೈ” ಮನೋಭಾವದಿಂದ ಇಂದು ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳು ನಮ್ಮನ್ನು ಲಘುವಾಗಿ ತೆಗೆದುಕೊಂಡಿದ್ದಾರೆ.

ಸತ್ಯಾಗ್ರಹದ ದಿನದಂದು ನಮ್ಮ ಸಾರ್ವಭೌಮ ಶಕ್ತಿಯನ್ನು ತೋರಿಸೋಣ. ಅದ್ದರಿಂದ ಸತ್ಯಾಗ್ರಹದಲ್ಲಿ ಎಲ್ಲರೂ ಭಾಗವಹಿಸಿ ಎಂದು ಮೈಸೂರು ಗ್ರಾಹಕರ ಪರಿಷತ್ ಮನವಿ ಮಾಡಿದೆ.

ಉತ್ತಮ ಆಡಳಿತವನ್ನು ತರಲು ಮತ್ತು ನಾಗರಿಕರನ್ನು “ಯಜಮಾನರು” ಎಂದು ಪರಿಗಣಿಸಲು ಪ್ರಾರಂಭಿಸಿ ಉತ್ತಮ ಆಡಳಿತವನ್ನು ಜಾರಿಗೊಳಿಸಲು, ಕೆಲವೇ ಕೆಲವಾದರೂ ಹೇಳಿದ್ದನ್ನು ಕೇಳಿಸಿ ಕೊಳ್ಳುವ, ಸಮರ್ಪಿತ, ಪ್ರಾಮಾಣಿಕ ಮತ್ತು ಸಮರ್ಥ ಅಧಿಕಾರಿಗಳಿಗೆ ಮತ್ತು ರಾಜಕೀಯ ನಾಯಕರಿಗೆ ಮನವಿ ಮಾಡಲು ಮೈಸೂರು ಗ್ರಾಹಕರ ಪರಿಷತ್ ಈ ರೀತಿಯ ಹೊಸತಾದ, ವಿಶೇಷವಾದ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದೆ.

Key words: Satyagraha – good governance -n January 29 – Maigrapa – Mysore

 

website developers in mysore