ಸತೀಶ್ ಜಾರಕಿಹೊಳಿ ಅವರನ್ನ ಸಚಿವರನ್ನಾಗಿ ಮಾಡಬಾರದಿತ್ತು- ರಮೇಶ್ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಬಸವರಾಜ ಹೊರಟ್ಟಿ…

Promotion

ಹುಬ್ಬಳ್ಳಿ,ಮೇ,7,2019(www.justkannada.in): ಸಚಿವ ಸ್ಥಾನದಿಂದ ರಮೇಶ್ ಜಾರಕಿಹೊಳಿಯನ್ನ  ಕೈಬಿಟ್ಟಿದ್ದು ಸರಿಯಲ್ಲ ಎಂದು ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ ಟೀಕಿಸಿದ್ದಾರೆ.

 ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಬಸವರಾಜ ಹೊರಟ್ಟಿ,   ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈ ಬಿಟ್ಟಿದ್ದು ತಪ್ಪು ಕ್ರಮ. ಈ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ತಪ್ಪು ಮಾಡಿದೆ. ರಮೇಶ್ ಜಾರಕಿಹೊಳಿ ಅವರನ್ನು ಕೈ ಬಿಡುವುದಾದರೆ ಅವರನ್ನೇಕೆ ಸಚಿವರನ್ನಾಗಿ ಮಾಡಿದರು ಎಂದು ಪ್ರಶ್ನಿಸಿದ್ದಾರೆ.

ಸತೀಶ್ ಜಾರಕಿಹೊಳಿ ಆರಾಮವಾಗಿದ್ದರು. ಅವರನ್ನ ಸಚಿವರನ್ನಾಗಿ ಮಾಡಬಾರದಿತ್ತು. ರಮೇಶ್ ಜಾರಕಿಹೊಳಿಯನ್ನ ಸಚಿವ ಸ್ಥಾನದಿಂದ ಕೈಬಿಡಬಾರದಿತ್ತು. ಮೇಲಿನವರ ತಪ್ಪಿನಿಂದಾಗಿ ಈ ರೀತಿ ತಪ್ಪಾಗಿದೆ ಎಂದು ಬಸವರಾಜ ಹೊರಟ್ಟಿ ಅಸಮಾಧಾನ ಹೊರ ಹಾಕಿದರು.

Key words: Satish Jarakihili – minister-  Ramesh Jarakiholi- bat –Basavaraja-horatti