ಸಿದ್ಧರಾಮಯ್ಯ ವಿರುದ್ಧ ಹೆಚ್.ಡಿಕೆ ಹೇಳಿಕೆಗೆ ಸತೀಶ್ ಜಾರಕಿಹೊಳಿ ತಿರುಗೇಟು.

Promotion

ಹಾವೇರಿ,ಅಕ್ಟೋಬರ್,14,2021(www.justkannada.in): ಪುಟಗೋಸಿ ವಿರೋಧ ಪಕ್ಷದ ಸ್ಥಾನಕ್ಕಾಗಿ ಸಿದ್ದರಾಮಯ್ಯ ಮೈತ್ರಿ ಸರ್ಕಾರವನ್ನು ತೆಗೆದರು ಎಂದು ಹೇಳಿಕೆ ನೀಡಿದ ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮಾತನಾಢಿರುವ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ, ಸಮ್ಮಿಶ್ರ ಸರ್ಕಾರ ಪತನವಾಗಿ ಮತ್ತೊಂದು ಸರ್ಕಾರ ಬಂದಿದೆ. ಸಮ್ಮಿಶ್ರ ಸರ್ಕಾರ ಏಕೆ ಬಿತ್ತು ಎಂದು ಎಲ್ಲರಿಗೂ ಗೊತ್ತಿದೆ. ಸಮ್ಮಿಶ್ರ ಸರ್ಕಾರ ಪತನವಾಗಿರುವ ಬಗ್ಗೆ ಈಗ ಚರ್ಚೆ ಮಾಡುವುದು ಸರಿಯಲ್ಲ. ಹೆಚ್​​ಡಿ ಕುಮಾರಸ್ವಾಮಿ ಅವರ ಆರೋಪಕ್ಕೆ ಸಿದ್ದರಾಮಯ್ಯ ಉತ್ತರ ನೀಡಿದ್ದಾರೆ ಎಂದು  ಹೇಳಿದ್ದಾರೆ.There-grouping-all-parties-That's-not-new-KPCC president-Sathisha Zarakihulli

ಕಾಂಗ್ರೆಸ್ ಮುಳುಗುವ ಹಡಗು ಎಂಬ ಆರೋಪದ ವಿಚಾರವಾಗಿ ಬಿಜೆಪಿಯ ಆರೋಪಕ್ಕೆ ಟಾಂಗ್ ನೀಡಿದ  ಸತೀಶ್ ಜಾರಕಿಹೊಳಿ,  ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಏನಾಗಿದೆ?, ಬಿಜೆಪಿಯವರ ಪರಿಸ್ಥಿತಿ ಏನಾಗಿದೆ? ಯಾರನ್ನೂ ಯಾರೂ ಮುಳುಗಿಸುವುದಕ್ಕೆ ಆಗುವುದಿಲ್ಲ. ಮತದಾರರು ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು.

Key words: Sathish  jarkiholi- HD Kumaraswamy- statement -against -Siddaramaiah