ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ ವಹಿಸಿದ್ದು ಕಣ್ಣೋರೆಸುವ ತಂತ್ರ: ತಿಂಗಳೊಳಗೆ ಪ್ರಕರಣ ಕ್ಲೋಸ್- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

Promotion

ವಿಜಯಪುರ,ಜನವರಿ,17,2023(www.justkannada.in): ಸ್ಯಾಂಟ್ರೋ ರವಿ  ಪ್ರಕರಣವನ್ನ ಸಿಐಡಿಗೆ ವಹಿಸಿದ್ದು ಕಣ್ಣೋರೆಸುವ ತಂತ್ರವಷ್ಟೆ. ಒಂದು ತಿಂಗಳೊಳಗೆ ಪ್ರಕರಣ  ಮುಚ್ಚಿಹೋಗುತ್ತದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಪಂಚರತ್ನಯಾತ್ರೆ ನಡೆಯಿತ್ತಿದ್ದು, ಇಂದು ಇಂಡಿ ಮತ ಕ್ಷೇತ್ರದಲ್ಲಿ ಯಾತ್ರ ನಡೆಯಿತು. ಈ ವೇಳೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ,  ಸ್ಯಾಂಟ್ರೋ ರವಿ ಕೇಸ್ ಸಿಐಡಿಗೆ  ನೀಡಿದ್ದು ಕಣ್ಣೋರೆಸುವ ತಂತ್ರ. ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಘಟಾನುಘಟಿ ನಾಯಕರಿದ್ದಾರೆ. 1 ತಿಂಗಳೊಳಗೆ ರವಿ ಪ್ರಕರಣ ಮುಚ್ಚಿ ಹಾಕುತ್ತಾರೆ ಎಂದರು.

ಎಲೆಕ್ಷನ್ ಮುನ್ನ 13 ಸಚಿವರ ಸಿಡಿ ಬಿಡುಗಡೆ ಹೇಳಿಕೆ ವಿಚಾರ ಕುರಿತು  ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿಎಂ ಇಬ್ರಾಹಿಂ ಹೇಳಿರುವ ಸಿಡಿ ಬಗ್ಗೆ ನಾನು ಮಾತನಾಡಲ್ಲ. ಅವರನ್ನೇ ಕೇಳಿ. ಸಿಡಿಗಳನ್ನು ಇಟ್ಟುಕೊಂಡು ಯಾರೂ ರಾಜಕಾರಣ ಮಾಡಬಾರದು ಎಂದರು.

Key words: Santro Ravi -case – CID -Former CM -HD Kumaraswamy