ಸಂಜಯ್ ದತ್’ಗೆ ಯುಎಇ ಸರಕಾರದಿಂದ ಗೋಲ್ಡನ್ ವೀಸಾ

Promotion

ಬೆಂಗಳೂರು, ಮೇ 27, 2021 (www.justkannada.in): ಸಂಜಯ್ ದತ್‌ಗೆ ಯುಎಇಯ ಗೋಲ್ಡನ್ ವೀಸಾ ನೀಡಲಾಗಿದೆ.

ಹೌದು. ನಟ ಸಂಜಯ್ ದತ್‌ಗೆ ಯುನೈಟೆಡ್ ಅರಬ್ ಎಮರೈಟ್ಸ್ ಸರ್ಕಾರದಿಂದ ವಿಶೇಷ ಗೌರವ ನೀಡಲಾಗಿದೆ.

ಮೇಜರ್ ಜನರಲ್ ಮೊಹಮ್ಮದ್ ಅಲ್ ಮಾರಿ ಅವರ ಸಮ್ಮುಖದಲ್ಲಿ ಯುಎಇ ಗೋಲ್ಡನ್ ವೀಸಾ ದೊರೆತಿದೆ.

ಈ ವಿಷಯವನ್ನು ಸ್ವತಃ ಸಂಜಯ್ ದತ್ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಯುಎಇ ಸರ್ಕಾರ ಮತ್ತು ಫ್ಲೈ ದುಬೈ ಸಿಇಒ ಹಮದ್ ಒಬೈದಲ್ಲಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ ಸಂಜಯ್ ದತ್.