ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಗಳ ಹೆಸರೇನು ಗೊತ್ತೇ?

Promotion

ಬೆಂಗಳೂರು:ಜೂ-24: ಸ್ಯಾಂಡಲ್​ವುಡ್​ ರಾಕಿಂಗ್ ಸ್ಟಾರ್ ಯಶ್‌ ಹಾಗೂ ರಾಧಿಕಾ ಪಂಡಿತ್ ಮುದ್ದಿನ ಮಗಳಿಗೆ ನಾಮಕರಣ ಮಾಡಲಾಗಿದ್ದು, ಅಭಿಮಾನಿಗಳ ಬಹುದಿನಗಳ ಕುತೂಹಲಕ್ಕೆ ತೆರೆ ಬಿದ್ದಿದೆ.

ಯಶ್-ರಾಧಿಕಾ ದಂಪತಿ ತಮ್ಮ ಪುತ್ರಿಗೆ ‘ಆಯ್ರಾ’ ಎಂದು ನಾಮಕರಣ ಮಾಡಿದ್ದಾರೆ. ರಾಧಿಕಾ ಮತ್ತು ಯಶ್ ಇಬ್ಬರ ಹೆಸರನ್ನು ಸೇರಿಸಿ ಮಗಳಿಗೆ ಈ ಹೆಸರು ಇಟ್ಟಿದ್ದು, ಆಯ್ರಾ ಎಂದರೆ ‘ಗೌರವಾನ್ವಿತ’ ಎಂದು ಅರ್ಥ.

ತಾಜ್ ವೆಸ್ಟ್ ಎಂಡ್‌ನಲ್ಲಿ ಕುಟುಂಬದವರು ಮತ್ತು ಚಿತ್ರರಂಗದ ಆಪ್ತರೊಂದಿಗೆ ನಡೆದ ನಾಮಕರಣ ಸಮಾರಂಭದಲ್ಲಿ ಪುತ್ರಿಗೆ ಸುಂದರವಾದ ಹೆಸರಿಡುವ ಮೂಲಕ ಹಲವು ದಿನಗಳಿಂದ ಯಶ್-ರಾಧಿಕಾ ಮಗಳ ಹೆಸರೇನಿಡಬಹುದು ಎಂಬ ನಿರೀಕ್ಷೆಗೆ ಕೊನೆಗೂ ತೆರೆ ಎಳೆದಿದ್ದಾರೆ.

ಈ ಕುರಿತು ನಟ ಯಶ್‌ ಟ್ವಿಟರ್‌ನಲ್ಲಿ ವಿಡಿಯೋ ಬಿಡುಗಡೆ ಮಾಡಿದ್ದು, ನಾಮಕರಣದ ದೃಶ್ಯಾವಳಿಗಳನ್ನು ಸೆರೆಹಿಡಿಯಲಾಗಿದೆ. ವಿಡಿಯೋದ ಕೊನೆಯಲ್ಲಿ ಆಯ್ರಾ ವೀ ಲವ್‌ ಯು ಎಂದು ಹೇಳಲಾಗಿದ್ದು, ನಮ್ಮ ಪ್ರೀತಿಯ ಪುಟ್ಟ ರಾಜಕುಮಾರಿಯನ್ನು ಪರಿಚಯಿಸುತ್ತಿದ್ದೇವೆ. ನಮ್ಮದೇ ಉಸಿರಿನ ಮಗಳೆಂಬ ಕನಸಿಗೆ ಇಂದು ಹೆಸರಿಟ್ಟ ಸಂಭ್ರಮ. ಹರಸಿ ಹಾರೈಸಿ ಎಂದು ಬರೆದುಕೊಂಡಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಗಳ ಹೆಸರೇನು ಗೊತ್ತೇ?
Sandalwood,Yash-Radhika Pandit’s, daughter Ayra