ಶ್ರೀಗಂಧದ ಮರಕ್ಕೆ ಕೊಡಲಿಪೆಟ್ಟು ಪ್ರಕರಣ: ಗುತ್ತಿಗೆದಾರನ ಮೇಲೆ FIR ದಾಖಲು…

Promotion

ಮೈಸೂರು,ಸೆಪ್ಟಂಬರ್,23,2022(www.justkannada.in):  ರಸ್ತೆ ಅಭಿವೃದ್ದಿ ಕಾಮಗಾರಿ ವೇಳೆ ಶ್ರೀಗಂಧದ ಮರ ಹನನ ಮಾಡಿದ ಗುತ್ತಿಗೆದಾರನ ವಿರುದ್ಧ ಅರಣ್ಯ ಇಲಾಖೆ ಅಧಿಕಾರಿಗಳು FIR ದಾಖಲು ಮಾಡಿದ್ದಾರೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಎಸ್.ಎಲ್.ಜಿ.ಕನ್ಸ್ಟ್ರಕ್ಷನ್ಸ್ ನ ಮಾಲೀಕರಾದ ಲಕ್ಷ್ಮೇಗೌಡ ಮೇಲೆ ಪ್ರಕರಣ ದಾಖಲಾಗಿದೆ. ಮೈಸೂರಿನ ಮೇಟಗಳ್ಳಿ ಬಡಾವಣೆಯ ರೈಲ್ವೆ ಹಳಿ ಪಕ್ಕದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಯನ್ನ ಮೈಸೂರು ನಗರಾಭಿವೃದ್ದಿ ವತಿಯಿಂದ ಎಸ್.ಎಲ್.ಜಿ.ಕನ್ಸ್ಟ್ರಕ್ಷನ್ಸ್ ಗೆ ಗುತ್ತಿಗೆ ನೀಡಲಾಗಿತ್ತು. ಕಾಮಗಾರಿ ವೇಳೆ ಗುತ್ತಿಗೆದಾರನ ನಿರ್ಲಕ್ಷ್ಯತನಕ್ಕೆ ಶ್ರೀಗಂಧದ ಮರ ಹನನವಾಗಿತ್ತು.

ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಜೊತೆಗೆ ಪರಿಸರವಾದಿ ಬಾನುಮೋಹನ್  ಅವರು ಗುತ್ತಿಗೆದಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು. ಇದು ಸುದ್ಧಿಯಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನ ಸೆಳೆದಿತ್ತು. ಆರ್.ಎಫ್.ಓ.ಸುರೇಂದ್ರ, ಡಿ.ಆರ್.ಎಫ್. ಚಂದ್ರಶೇಖರ್, ಫಾರೆಸ್ಟ್ ಗಾರ್ಡ್ ಜಗದೀಶ್  ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಮುಡಾ 5A ವಲಯದ AEE ರೂಪಶ್ರೀ ಹಾಗೂ AE ರವೀಂದ್ರ  ಅವರ ಬಳಿ ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಇದೀಗ ಗುತ್ತಿಗೆದಾರನ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Key words: Sandalwood -tree – case-FIR -filed -against –contractor-mysore