ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣ: ಇಂದು ಫಿಲ್ಮಂ ಚೇಂಬರ್ ನಿಂದ ತುರ್ತು ಮೀಟಿಂಗ್….

Promotion

ಬೆಂಗಳೂರು,ಸೆಪ್ಟಂಬರ್,5,2020(www.justkannada.in):  ಡ್ರಗ್ಸ್ ದಂಧೆಗೆ ಸ್ಯಾಂಡಲ್ ವುಡ್ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಫಿಲ್ಮಂ ಚೇಂಬರ್ ನಿಂದ ತುರ್ತು ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.jk-logo-justkannada-logo

ಡ್ರಗ್ಸ್ ಜಾಲದಲ್ಲಿ ಸಿಲುಕಿರುವ ನಟಿಯರ ಆಪ್ತರಾದ ರವಿಶಂಕರ್ ಮತ್ತು ರಾಹುಲ್ ನನ್ನ ಸಿಸಿಬಿ ವಿಚಾರಣೆ ನಡೆಸಿದ್ದು ಬಂಧಿಸಿದೆ. ಇನ್ನು ಇತ್ತ ನಟಿ ರಾಗಿಣಿ ಅವರನ್ನೂ ನಿನ್ನೆಯಿಂದ ಸಿಸಿಬಿ ಪೊಲೀಸರುವಿಚಾರಣೆಗೊಳಪಡಿಸಿದ್ದು ಇಂದು ಸಹ ಮತ್ತೆ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.

ಈ ಮಧ್ಯೆ ಡ್ರಗ್ಸ್ ದಂಧೆ ನಂಟು ಆರೋಪ ಕೇಳಿ ಬಂದ ಹಿನ್ನೆಲೆ ಇಂದು ಮಧ್ಯಾಹ್ನ 11.30ಕ್ಕೆ  ಫಿಲ್ಮಂ ಚೇಂಬರ್ ಅಧ್ಯಕ್ಷ ಜಯರಾಜ್ ಅವರ ನೇತೃತ್ವದಲ್ಲಿ ತುರ್ತು ಮೀಟಿಂಗ್ ನಡೆಯಲಿದೆ. ಡ್ರಗ್ಸ್ ದಂಧೆಗೆ  ನಟ ನಟಿಯರ ನಂಟು ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲಿದ್ದಾರೆ.

Key words: Sandalwood – drug- dealing-Emergency -Meeting – Film Chamber- today.