ಬಾಲಿವುಡ್ ವೆಬ್ ಸೀರಿಸ್’ನಲ್ಲಿ ಮಿಂಚಲಿದ್ದಾರೆ ಕಿರಿಕ್ ಪಾರ್ಟಿ ಸಂಯುಕ್ತಾ!

Promotion

ಬೆಂಗಳೂರು, ಜೂನ್ 12, 2021 (www.justkannada.in): ನಟಿ ಸಂಯುಕ್ತ ಹೆಗ್ಡೆ ಸದ್ದಿಲ್ಲದೇ ಬಾಲಿವುಡ್​ಗೆ ಕಾಲಿಟ್ಟಿದ್ದಾರೆ.

ಹೌದು. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಕಾಲಿಟ್ಟಿದ್ದ ಸಂಯುಕ್ತ ಹೆಗ್ಡೆ ಬಾಲಿವುಡ್ ಗೆ ಕಾಲಿಟ್ಟಿದ್ದಾರೆ. ಅಂದಹಾಗೆ ಅವರು ನಟಿಸುತ್ತಿರುವುದು ಚಿತ್ರದಲ್ಲಲ್ಲ. ಬದಲಿಗೆ ವೆಬ್ ಸೀರಿಸ್ ನಲ್ಲಿ.

ಈ ವಿಷಯವನ್ನು ಸಂಯುಕ್ತಾ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.  ಪಂಚ್ ಬೀಟ್​ ವೆಬ್​ಸೀರಿಸ್​ನಲ್ಲಿ ಸಂಯುಕ್ತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿ ಭಾಷೆಯಲ್ಲಿ ತೆರೆ ಕಾಣುತ್ತಿರುವ ಪಂಚ್​ ಬೀಟ್​ ಸೀರಿಸ್​ 2ರಲ್ಲಿ ಸಂಯುಕ್ತ ಹೆಗ್ಡೆ , ಮೀಶಾ ಅನ್ನೋ ಪಾತ್ರದಲ್ಲಿ ಮಿಂಚಲಿದ್ದಾರೆ. ಪಂಚ್​ ಬೀಟ್​ ಸೀರಿಸ್​ 2ಗೆ ಅಕ್ಷಯ್ ಚೌಬೆ ಆಕ್ಷನ್​ ಕಟ್​ ಹೇಳಿದ್ದು, ಎಕ್ತಾ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ.