ಏರ್’​ಪೋರ್ಟ್​ನಲ್ಲಿ ಸಮಂತಾ ಡ್ಯಾನ್ಸ್ ಕಂಡ ಫ್ಯಾನ್ಸ್ ಫಿದಾ!

Promotion

ಬೆಂಗಳೂರು, ಫೆಬ್ರವರಿ 19, 2022 (www.justkannada.in): ನಟಿ ಸಮಂತಾ ಏರ್​ಪೋರ್ಟ್​ನಲ್ಲಿ ಡ್ಯಾನ್ಸ್ ಮಾಡಿರುವ ಹೊಸ ವಿಡಿಯೋ​ ಸಖತ್​ ವೈರಲ್​ ಆಗುತ್ತಿದೆ. ಇದನ್ನು ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಹೌದು. ‘ಹೂ ಅಂತೀಯಾ ಮಾವ.. ಊಹೂ ಅಂತಿಯಾ ಮಾವ ಎಂದು ಪುಷ್ಪಾ ಚಿತ್ರದಲ್ಲಿ ಹೆಜ್ಜೆ ಹಾಕಿದ್ದ ಸಮಂತಾ. ಪಡ್ಡೆಗಳ ಹೃದಯ ಗೆದ್ದಿದ್ದರು.

ಸಮಂತಾ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜತೆಗೆ ಅನೇಕ ಜಾಹೀರಾತು ಶೂಟಿಂಗ್​​ನಲ್ಲೂ ಅವರು ಪಾಲ್ಗೊಳ್ಳುತ್ತಿದ್ದಾರೆ.

ಶೂಟಿಂಗ್ ಕಾರಣಕ್ಕೆ ಸಾಕಷ್ಟು ಟ್ರಾವೆಲ್ ಮಾಡುವ ಸಮಂತಾ ಫ್ಲೈಟ್​ನಲ್ಲಿ ಸುತ್ತಾಡುತ್ತಾರೆ. ಕೆಲವೊಮ್ಮೆ ವಿಮಾನ ಲೇಟ್​ ಆದಾಗ, ನಿಲ್ದಾಣದಲ್ಲೇ ಕಾಯಬೇಕಾಗುತ್ತದೆ. ಮಧ್ಯರಾತ್ರಿ ವಿಮಾನ ಏರೋಕೆ ಹೋದರೆ ನಿದ್ರೆಯೆಲ್ಲ ಹಾಳು. ಸಮಂತಾಗೂ ಮಧ್ಯರಾತ್ರಿ ಫ್ಲೈಟ್​ ಇತ್ತು. ಈ ಸಂದರ್ಭದಲ್ಲಿ ಅವರು ಸಖತ್​ ಆಗಿ ಸ್ಟೆಪ್​ ಹಾಕಿದ್ದಾರೆ.