ಸಂಬಳ ಆಗದ ಹಿನ್ನೆಲೆ: ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ಕೊಟ್ಟ 108 ಆಂಬ್ಯುಲೆನ್ಸ್ ಚಾಲಕರು.

Promotion

ಬೆಂಗಳೂರು,ಅಕ್ಟೋಬರ್,6,2022(www.justkannada.in):  ಕಳೆದ ಎರಡು ತಿಂಗಳಿನಿಂದ ಸಂಬಳ ಆಗದ ಹಿನ್ನೆಲೆಯಲ್ಲಿ 108 ಆಂಬ್ಯುಲೆನ್ಸ್ ಚಾಲಕರು ಸರ್ಕಾರಕ್ಕೆ ಒಂದು ದಿನದ ಡೆಡ್ ಲೈನ್ ನೀಡಿದ್ದಾರೆ.

ಸಂಬಳ ನೀಡದ ಹಿನ್ನೆಲೆ 108 ಆಂಬ್ಯುಲೆನ್ಸ್ ಚಾಲಕರು ಇಂದಿನಿಂದ ಮುಷ್ಕರಕ್ಕೆ ಕರೆ ನೀಡಲು ತೀರ್ಮಾನಿಸಿದ್ದರು. ಆದರೆ ದಸರಾ ರಜೆ ಹಿನ್ನೆಲೆ ಆರೋಗ್ಯ ಇಲಾಖೆ ಸಮಯ ಕೇಳಿರುವ ಹಿನ್ನೆಲೆಯಲ್ಲಿ ಸರ್ಕಾರಕ್ಕೆ ಒಂದು ದಿನದ ಗಡುವು ನೀಡಿದ್ದಾರೆ.

ನಾಳೆ ಬೆಳಿಗ್ಗೆ 11 ಗಂಟೆಗೆ ಸಂಬಳ ಕುರಿತು ಸಭೆ ನಡೆಯಲಿದ್ದು, ಸಭೆಯಲ್ಲಿ ಇತ್ಯಾರ್ಥವಾಗದಿದ್ದರೇ ರಜೆ ಮೇಲೆ ತೆರಳಲು 108 ಆಂಬ್ಯುಲೆನ್ಸ್ ಚಾಲಕರು ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

Key words: salary-108 ambulance- drivers – one-day -dead line – government