ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ ಸಲಾಂ ಆರತಿ ಸ್ಥಗಿತವಾಗಿಲ್ಲ- ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ.

ಬೆಂಗಳೂರು,ಡಿಸೆಂಬರ್,10,2022(www.justkannada.in):  ಟಿಪ್ಪು ಕಾಲದಲ್ಲಿ ಆರಂಭವಾಗಿದ್ದ ದೀವಟಿಗೆ ಸಲಾಂ ಆರತಿಯನ್ನ ಧಾರ್ಮಿಕ ಪರಿಷತ್ ಸ್ಥಗಿತಗೊಳಿಸಿದೆ ಎಂಬ ಸುದ್ಧಿಯಾಗಿತ್ತು. ಆದರೆ ಈ ಕುರಿತು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವೆ ಶಶಿಕಲಾ ಜೊಲ್ಲೆ, ರಾಜ್ಯದ ಯಾವುದೇ ದೇವಸ್ಥಾನಗಳಲ್ಲಿ  ಸಲಾಂ ಆರತಿ ಸ್ಥಗಿತವಾಗಿಲ್ಲ. ದೇವರಿಗೆ ಮಾಡುವ ಆರತಿಯನ್ನ ನಿಲ್ಲಿಸುವುದಿಲ್ಲ ಸಲಾಂ ಆರತಿ ಎಂಬ ಹೆಸರು ಬದಲಾವಣೆಗೆ ಮನವಿ ಬಂದಿದೆ.  ಹೆಸರು ಬದಲಿಸುವಂತೆ ಧಾರ್ಮಿಕ ಪರಿಷತ್ ಮನವಿ ಮಾಡಿದೆ. ರಾಜ್ಯ ಧಾರ್ಮಿಕ ಪರಿಷತ್ ಗೂ ಅಧಿಕಾರವಿದೆ.  ಆ ವ್ಯಾಪ್ತಿಯಲ್ಲಿ ಧಾರ್ಮಿಕ ಪರಿಷತ್ ಮನವಿ ಮಾಡಿದೆ ಎಂದರು.

ಈ ಸಂಬಂಧ ಅಧಿಕಾರಿಗಳು ಇತಿಹಾಸಕಾರರ ಜತೆ ಚರ್ಚೆ ಮಾಡಬೇಕು ಚರ್ಚೆ ಬಳಿಕ ಸಿಎಂ ಬೊಮ್ಮಾಯಿ ಜತೆಗೂ ಮಾತನಾಡಬೇಕು. ನಂತರ ಅಂತಿಮವಾಗಿ ಸರ್ಕಾರದ ಮಟ್ಟದಲ್ಲಿ ನಿರ್ಧಾರ ಮಾಡಲಾಗುತ್ತದೆ . ಸಿಎಂ ಬೊಮ್ಮಾಯಿ ಜತೆ ಚರ್ಚಿಸಿ 10 ರಿಂದ 15 ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

Key words: Salam Aarti -not – stopped – temple -Minister Shashikala Jolle