ಸಲಗ ಚಿತ್ರ ಯಶಸ್ವಿ ಹಿನ್ನೆಲೆ: ಮೈಸೂರಿನಿಂದಲೇ ವಿಜಯಯಾತ್ರೆ- ನಟ ದುನಿಯಾ ವಿಜಯ್.

Promotion

ಮೈಸೂರು,ಅಕ್ಟೋಬರ್,28,2021(www.justkannada.in): ನಟ ದುನಿಯಾ’ ವಿಜಯ್ ನಟಿಸಿರುವ ‘ಸಲಗ’ ಸಿನಿಮಾ ರಾಜ್ಯಾದ್ಯಂತ  ಉತ್ತಮ ಪ್ರದರ್ಶನ ಕಾಣುತಿದ್ದು, ‘ಸಲಗ’ ಸಿನಿಮಾಗೆ ಅಭಿಮಾನಿಗಳಿಂದ ಭರ್ಜರಿ ಸ್ವಾಗತ ಸಿಕ್ಕಿದೆ.

ಈ ನಡುವೆ ಚಿತ್ರದ ಯಶಸ್ಸಿನ ಬಗ್ಗೆ ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಢಿದ ನಟ ದುನಿಯಾ ವಿಜಯ್, ಸಲಗ ಚಿತ್ರ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದೆ. ಕೊರೊನಾದಿಂದಾಗಿ ತೆರೆಮೇಲೆ ಬರೋದು ತಡವಾಯ್ತು. ಆದರೆ ಜನ ಚಿತ್ರವನ್ನ ಒಪ್ಪಿಕೊಂಡು ಯಶಸ್ವಿಗೊಳಿಸಿದ್ದಾರೆ. ಈ ಹಿನ್ನೆಲೆ ಮೈಸೂರಿನಿಂದಲೇ ವಿಜಯಯಾತ್ರೆ ಆರಂಭಿಸಿದ್ದೇವೆ‌ ಎಂದರು.

ಚಿತ್ರದಲ್ಲಿ ಮೈಸೂರು ಮೂಲದ ಹಲವು ಯುವಕರು ನಟಿಸಿದ್ದಾರೆ. ಈಗಾಗಿ ಅವರ ಮೈಸೂರಿನಲ್ಲೇ ಅವರ ಪರಿಚಯ ಮಾಡುವ ದೃಷ್ಟಿಯಿಂದ ಸುದ್ದಿಗೋಷ್ಟಿ‌ ಮಾಡ್ತಿದ್ದೇವೆ. ನವೆಂಬರ್ 1ರಿಂದ ರಾಜ್ಯಾದ್ಯಂತ ಸಂಚಾರ ಮಾಡಲಾಗುವುದು. ಚಿತ್ರದ ಯಶಸ್ಸಿಗೆ ಧನ್ಯವಾದ ತಿಳಿಸಲು ರಾಜ್ಯ ಪ್ರವಾಸ ಮಾಡಲಾಗುವುದು ಎಂದು ನಟ ದುನಿಯಾ ವಿಜಯ್  ತಿಳಿಸಿದರು.

Key words: Salaga -Successful –Mysore- Actor- Duniya Vijay.