ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ನಿರ್ಧಾರ.

Promotion

ಬೆಂಗಳೂರು,ಮಾರ್ಚ್,18,2022(www.justkannada.in):  ನಟ ಪವರ್ ಸ್ಟಾರ್ ದಿ. ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲು ನಿರ್ಧಾರ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜತೆ ಮಾತನಾಡಿದ ಮಾಹಿತಿ ನೀಡಿದ ಸಚಿವ ಎಸ್.ಟಿ ಸೋಮಶೇಖರ್,  ಪುನೀತ್ ರಾಜ್ ಕುಮಾರ್ ಡೈರಿ ಅಂಬಾಸಿಡರ್ ಆಗಿದ್ದರು ಹೀಗಾಗಿ ಅಪ್ಪುಗೆ ಮರಣೋತ್ತರ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಒಟ್ಟು 50 ಮಂದಿಗೆ ಸಹಕಾರ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಅಂತಿಪಟ್ಟಿ ಸಿಎಂಗೆ ಕೊಟ್ಟಿದ್ದೇವೆ ಸಂಜೆ ಸಿಎಂ ಪ್ರಶಸ್ತಿ ಪಟ್ಟಿ ನೀಡಲಿದ್ದಾರೆ. ನಂತರ ಸಹಕಾರ ರತ್ನ ಪ್ರಶಸ್ತಿ ಪಟ್ಟಿ  ಪ್ರಕಟಿಸುತ್ತೇವೆ ಎಂದರು.

ಹಾಗೆಯೇ ಸಹಕಾರ ರತ್ನ ಪ್ರಶಸ್ತಿ 15 ಗ್ರಾಂ ಚಿನ್ನದ ಪದಕ  ಒಂದು ಸರ್ಟಿಫಿಕೇಟ್ ಒಳಗೊಂಡಿದೆ ಎಂದರು. ನಟ ಅಪ್ಪುಗೆ ಈಗಾಗಲೇ ಕರ್ನಾಟಕ ರತ್ನ ಪ್ರಶಸ್ತಿ ಘೋಷಿಸಲಾಗಿದ್ದು ಶೀಘ್ರವೇ ಪ್ರದಾನ ಮಾಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Key words: sahakara ratna-award-punith rajkumar