ಮೈಸೂರಿನ ಪೆಗ್ಸ್ ಅಂಡ್ ಕೆಗ್ಸ್’ನಲ್ಲಿ ‘ಕ್ರಿಕೆಟ್ ದೇವರು’ ಬಳಸಿದ್ದ ಬ್ಯಾಟ್, ಧೋನಿ ಮತ್ತು ದ್ರಾವಿಡ್ ಗ್ಲೌಸ್ !

Promotion

ಮೈಸೂರು, ಅಕ್ಟೋಬರ್ 14, 2023 (www.justkannada.in): ವಿಶ್ವಕಪ್ ‍ಕ್ರಿಕೆಟ್’ನಲ್ಲಿ ಇಂದು ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಗೆದ್ದು ಬೀಗಿದೆ.

ಈ ಅದ್ಬುತ ಕ್ಷಣಗಳನ್ನ ಮೈಸೂರಿನ ಹುಣಸೂರು ರಸ್ತೆಯ ಪೆಗ್ಸ್ ಅಂಡ್ ಕೆಗ್ಸ್’ನಲ್ಲಿ ಬಂದ ಕ್ರಿಕೆಟ್ ಪ್ರೇಮಿಗಳು ಕಣ್ತುಂಬಿಕೊಂಡಿದ್ದಾರೆ. ನಾಲ್ಕು ಬೃಹತ್ ಸ್ಕ್ರಿನ್ ನಲ್ಲಿ ಕ್ರಿಕೆಟ್ ವೀಕ್ಷಿಸಿದ ಕ್ರಿಕೆಟ್ ಪ್ರೇಮಿಗಳು ಭಾರತ ಗೆಲುವು ಸಾಧಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದಾರೆ.

ಸಚಿನ್ ತೆಂಡೊಲ್ಕರ್ ಬಳಸಿದ್ದ ಬ್ಯಾಟ್, 2011ರಲ್ಲಿ ವರ್ಲ್ಡ್ ಕಪ್ ಕ್ರಿಕೆಟ್ ಪಂದ್ಯದಲ್ಲಿ ಆಟವಾಡಿದ್ದ 11 ಆಟಗಾರರ ಸಹಿಯುಳ್ಳ ಬ್ಯಾಟ್, ಮಹೇಂದ್ರ ಸಿಂಗ್ ಧೋನಿ ಮತ್ತು ರಾಹುಲ್ ದ್ರಾವಿಡ್ ಅವರ ಗ್ಲೌಸ್ ಗಳನ್ನು ಈ ನಡುವೆ ಹೋಟೆಲ್ ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

ಹೋಟೆಲ್‌ ಮಾಲೀಕ ಮಂಜು ಹಾಗು ಅವರ ಸ್ನೇಹಿತರು ಕ್ರಿಕೆಟ್ ಅಭಿಮಾನಿಗಳಾಗಿದ್ದು, ಹರಾಜು ಮೂಲಕ ಬ್ಯಾಟ್ ಹಾಗೂ ಗ್ಲೌಸ್ ಗಳನ್ನು ಖರೀದಿಸಿ ತೆಗೆದುಕೊಂಡು ಬಂದು ಕ್ರಿಕೆಟ್ ಪ್ರೇಮಿಗಳಿಗಾಗಿ ಪ್ರದರ್ಶನಕ್ಕೆ ಇರಿಸಿದ್ದಾರೆ.