ಸಚಿನ್ ತೆಂಡೂಲ್ಕರ್ ಹಾಗೂ ಗೌತಮ್ ಗಂಭೀರ್ ಅವರ ಹೇಳಿಕೆ ಅಪ್ರಬುದ್ಧ- ಕೆಪಿಸಿಸಿ ವಕ್ತಾರ ಎಚ್ ಎ ವೆಂಕಟೇಶ್…

ಮೈಸೂರು,ಫೆಬ್ರವರಿ,6,2021(www.justkannada.in): ನಮ್ಮ ಹೆಮ್ಮೆಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ಗೌತಮ್ ಗಂಭೀರ್ ಅವರ ಹೇಳಿಕೆ ಅಪ್ರಬುದ್ಧವಾಗಿದೆ. ರೈತರ ಪ್ರತಿಭಟನೆಗೆ ವಿದೇಶಿಗರು ಪ್ರತಿಕ್ರಿಯಿಸಬಾರದೆಂಬ ಅವರ ಹೇಳಿಕೆ ದ್ವಂದ್ವ ನೀತಿಯಿಂದ ಕೂಡಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಆಕ್ಷೇಪ ವ್ಯಕ್ತಪಡಿಸಿದರು.jk

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಹೆಚ್.ಎ ವೆಂಕಟೇಶ್, ಭಾರತದ ರೈತರ ಪ್ರತಿಭಟನೆ ಜಾಗತಿಕ ಮಟ್ಟದಲ್ಲಿ ಚರ್ಚಿಸಲ್ಪಡುತ್ತಿದೆ. ಈ ಪ್ರತಿಭಟನೆಗೆ ವಿಶ್ವವೇ ಪ್ರತಿಕ್ರಿಯಿಸುತ್ತಿದೆ ,ಇಂತಹ ಅಭಿಪ್ರಾಯಗಳು ನಮ್ಮ ದೇಶದ ಐಕ್ಯತೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.

ನಮ್ಮ ಹೆಮ್ಮೆಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಹಾಗೂ ಗೌತಮ್ ಗಂಭೀರ್ ಅವರ ಹೇಳಿಕೆ ಅಪ್ರಬುದ್ಧವಾಗಿದೆ. ನಮ್ಮ ಕ್ರಿಕೆಟ್ಟಿಗರು ಬೇರೆ ದೇಶಗಳಿಂದ ಅಭಿಮಾನಪೂರ್ವಕವಾಗಿ ನೀಡುವ ಪ್ರಶಸ್ತಿ ಫಲಕಗಳನ್ನು ಸ್ವೀಕರಿಸುತ್ತಾರೆ. ವಿದೇಶಿಗಳ ವಸ್ತುಗಳ ಜಾಹೀರಾತಿನಲ್ಲಿ ಪಾಲ್ಗೊಂಡು ಯಥೇಚ್ಛವಾಗಿ ಹಣ ಪಡೆಯುತ್ತಾರೆ. ಹೀಗಿರುವಾಗ ರೈತರ ಪ್ರತಿಭಟನೆಗೆ ವಿದೇಶಿಗಳು ಪ್ರತಿಕ್ರಿಯಿಸಬಾರದೆಂಬ ಅವರ ಹೇಳಿಕೆ ದ್ವಂದ್ವ ನೀತಿಯಿಂದ ಕೂಡಿದೆ. ಇದು ಅವರ ಅಪಾರ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎಂದು ಎಚ್.ಎ ವೆಂಕಟೇಶ್ ಬೇಸರ ವ್ಯಕ್ತಪಡಿಸಿದರು.Sachin Tendulkar - Gautam Gambhir-statement -KPCC spokesperson -H A Venkatesh

ಯಾವುದೇ ಕ್ಷೇತ್ರದಲ್ಲಿ ಜನಪ್ರಿಯಗೊಂಡಿರುವ ವ್ಯಕ್ತಿಗಳ ಹೇಳಿಕೆ ಆದರ್ಶ ಪ್ರಾಯವಾಗಿರಬೇಕು. ಯಾರನ್ನೋ ಮೆಚ್ಚಿಸಲು ಅಥವಾ ಸ್ವಹಿತ ಸಾಧಿಸಲು ನೀಡುವ ಹೇಳಿಕೆಯಿಂದ ಅವರ ಕೀರ್ತಿಗೆ ಕುಂದು ತರುತ್ತದೆ. ವಿಶ್ವಮಟ್ಟದಲ್ಲಿ ಚರ್ಚೆಯಾಗುತ್ತಿರುವ ಪ್ರತಿಭಟನೆಗೆ ಪರಿಪಕ್ವತೆಯಿಂದ ಪ್ರತಿಕ್ರಿಯಿಸಬೇಕು ಎಂದು ಎಚ್.ಎ ವೆಂಕಟೇಶ್ ಹೇಳಿದರು.

ಕೇಂದ್ರ ಸಚಿವ ಸದಾನಂದಗೌಡರ ಹೇಳಿಕೆ  ಸರಿಯಲ್ಲ…

ರಿಯಾನಾ  ಬಗ್ಗೆ ಕೇಂದ್ರ ಸಚಿವ ಡಿ.ವಿ ಸದಾನಂದಗೌಡರ ಹೇಳಿಕೆಯನ್ನ ಖಂಡಿಸಿರುವ ಹೆಚ್.ಎ ವೆಂಕಟೇಶ್, ಅಂತರಾಷ್ಟ್ರೀಯ ಸೆಲೆಬ್ರಿಟಿ ರಿಯಾನ ಅವರ ಬಗ್ಗೆ ಕೇಂದ್ರ ಸಚಿವ ಸದಾನಂದಗೌಡರ ಪ್ರತಿಕ್ರಿಯೆ ಅತ್ಯಂತ ಬಾಲಿಶವಾಗಿದೆ. ರಿಯಾನಾ ಬತ್ತದ ಗದ್ದೆ ನೋಡಿದ್ದರಾ? ಎಂದಿದ್ದಾರೆ. ಹಾಗಾದರೆ ಸದಾನಂದಗೌಡರು ಭತ್ತದ ನಾಟಿ ಮಾಡಿದ್ದಾರಾ? ಎಂದು ಟಾಂಗ್ ನೀಡಿದರು.

ರೈತರ ಹೆಸರಿನಲ್ಲಿ ಹಸಿರು ಟವೆಲ್ ಹಾಕಿಕೊಂಡು ಪ್ರಮಾಣವಚನ ಸ್ವೀಕರಿಸಿದರೆ ರೈತರ ಪ್ರತಿನಿಧಿ ಆಗುತ್ತಾರಾ..? ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

Key words: Sachin Tendulkar – Gautam Gambhir-statement -KPCC spokesperson -H A Venkatesh