ರಷ್ಯಾದ ಬಾಂಬ್ ದಾಳಿಯಲ್ಲಿ ವಿಶ್ವದ ಅತೀ ದೊಡ್ಡ ಸರಕು ಸಾಗಣೆ ವಿಮಾನ ನಾಶ.

Promotion

ಕೀವ್, ಫೆಬ್ರವರಿ 28, 2022 (www.justkannada.in): ಉಕ್ರೇನ್‌ನಲ್ಲಿ ನಿರ್ಮಿಸಿದ್ದಂತಹ ವಿಶ್ವದ ಅತೀ ದೊಡ್ಡ ಸರಕು ಸಾಗಣೆ ವಿಮಾನ ‘ಆಂತೊನೊವ್-೨೨೫ ಮ್ರಿಯಾ,’ ರಷ್ಯಾದಾಳಿಯಲ್ಲಿ ಸಿಲುಕಿ ನಾಶವಾಗಿದೆ ಎಂದು ವರದಿಯಾಗಿದೆ.

ಉಕ್ರೇನ್‌ ನ ರಾಜಧಾನಿ ಕ್ವೀವ್ ಬಳಿ ಇರುವ ಹಾಸ್ಟೊಮೆಲ್ ವಿಮಾನ ನಿಲ್ದಾಣದ ಬಳಿ ರಷ್ಯಾದ ಬಾಂಬ್ ದಾಳಿಯಲ್ಲಿ ‘ಆಂತೊನೊವ್-೨೨೫ ಮ್ರಿಯಾ,ನಾಶವಾಗಿದೆ ಎಂದು ಉಕ್ರೇನ್‌ನ ಶಸ್ತ್ರಾಸ್ತ್ರ ತಯಾರಿಕಾ ಕಂಪನಿ ಉಕ್ರೊಬೊರೊ ನಪ್ರಾಮ್ ವರದಿ ನೀಡಿದೆ.

“ರಷ್ಯಾದ ಸೈನಿಕರು ಉಕ್ರೇನ್ ದೇಶದ ಪ್ರಮುಖ ವಿಮಾನ ಆ್ಯನ್-೨೨೫ ಮ್ರಿಯಾವನ್ನು ನಾಶಪಡಿಸಿದ್ದಾರೆ.ಈ ಘಟನೆ ಕ್ವೀವ್ ಬಳಿ ಇರುವ ಹೊಸ್ಟೊಮೆಲ್‌ ನಲ್ಲಿರುವ ಆಂಟೊನೊವ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಈ ವಿಷಯವನ್ನು ಉಕ್ರೊಬೊರೊನ ಪ್ರಾಮ್ ತನ್ನ ಫೇಸ್‌ಬುಕ್ ಪುಟದಲ್ಲಿ ಹೇಳಿಕೊಂಡಿದೆ. ಈ ವಿಮಾನವನ್ನು ಪುನರ್‌ನಿರ್ಮಾಣ ಮಾಡಲು 3 ಬಿಲಿಯನ್‌ ಗೂ ಹೆಚ್ಚು ಮೊತ್ತದೊಂದಿಗೆ ಬಹಳ ದೀರ್ಘ ಸಮಯವೇ ಬೇಕಾಗುತ್ತದಂತೆ.

ಸುದ್ದಿಮೂಲ: ಡೆಕ್ಕನ್ ಹೆರಾಲ್ಡ್

Key words: Russia-bomb- world’s- largest –cargo-plane.