ಗ್ರಾಮೀಣ ಪ್ರದೇಶದ ಜನತೆ ದಯವಿಟ್ಟು ದಸರಾಗೆ ಬರಬೇಡಿ- ಮೈಸೂರು ಜಿ‌.ಪಂ ಸಿಇಓ ಡಿ.ಭಾರತಿ ಮನವಿ…

ಮೈಸೂರು,ಅಕ್ಟೋಬರ್,13,2020(www.justkannada.in): ಕೊರೋನಾ ಮಹಾಮಾರಿ  ಹರಡುತ್ತಿರುವ ಹಿನ್ನೆಲೆ ಗ್ರಾಮೀಣ ಪ್ರದೇಶದ ಜನತೆ ದಯವಿಟ್ಟು ದಸರಾಗೆ ಬರಬೇಡಿ ಎಂದು ಮೈಸೂರು ಜಿ‌.ಪಂ ಸಿಇಓ ಡಿ.ಭಾರತಿ ಮನವಿ ಮಾಡಿದ್ದಾರೆ.jk-logo-justkannada-logo

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ಜಿ‌.ಪಂ ಸಿಇಓ ಡಿ.ಭಾರತಿ, ಗ್ರಾಮೀಣ ಪ್ರದೇಶದ ಜನತೆ ದಯವಿಟ್ಟು ದಸರಾಗೆ ಬರಬೇಡಿ ದಸರಾ ನೋಡುವ ಆಸೆಯಿಂದ ಬರಲೇಬೇಡಿ. ದಸರಾದಲ್ಲಿ ಜಂಬೂಸವಾರಿ ಮೆರವಣಿಗೆ ಇರುವುದಿಲ್ಲ. ಟೆಕ್ನಿಕಲ್ ತಂಡದ ವರದಿ ಪ್ರಕಾರ ಅರಮನೆಯಲ್ಲಿ ಮಾತ್ರ ಜಂಬೂಸವಾರಿ ನಡೆಯಲಿದೆ. ಅರಮನೆ ಒಳಗೆ 300ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಸಾರ್ವಜನಿಕರಿಗೆ ನೇರವಾಗಿ ಜಂಬೂಸವಾರಿ ನೋಡುವ ಅವಕಾಶ ಇರುವುದಿಲ್ಲ. ಹಾಗಾಗಿ ಅನಾವಶ್ಯಕವಾಗಿ ಗ್ರಾಮೀಣ ಪ್ರದೇಶದ ಜನರು ನಗರಕ್ಕೆ ಬರಬೇಡಿ ಎಂದು ಮನವಿ ಮಾಡಿದ್ದಾರೆ.rural-people-please-do-not-come-dasara-mysore-zp-ceo-d-bharti

ಎಲ್ಲರೂ ಮನೆಮನೆಗಳಲ್ಲಿಯೇ ಇದ್ದು ಟಿವಿಗಳಲ್ಲಿ ದಸರಾ ನೋಡಿ. ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಟೆಲಿಕಾಸ್ಟ್ ವ್ಯವಸ್ಥೆ ಮಾಡಲಾಗುತ್ತದೆ. ಗ್ರಾಮೀಣ ಬಾಗದ ಜನರು ನಗರಕ್ಕೆ ಬಂದು ಕೊರೊನಾ ಹಬ್ಬಲು ಅವಕಾಶ ಮಾಡಿಕೊಡಬೇಡಿ. ಸೋಂಕಿನ ಲಕ್ಷಣ ಇರುವವರು ಟೆಸ್ಟ್ ಮಾಡಿಸಿಕೊಳ್ಳಿ. 60ವರ್ಷ ಮೇಲ್ಪಟ್ಟ ವೃದ್ದರು ಹಾಗೂ ಮಕ್ಕಳು ಅನಾವಶ್ಯಕ ಓಡಾಡುವುದನ್ನ ನಿಲ್ಲಿಸಿ ಎಂದು ಗ್ರಾಮೀಣ ಭಾಗದ ಜನತೆಗೆ ಜಿ.ಪಂ ಸಿಇಓ ಬಿ.ಭಾರತಿ ಸೂಚಿಸಿದ್ದಾರೆ.

Key words: rural People – please- do not come  Dasara- Mysore ZP-CEO D. Bharti