ಬೆಂಗಳೂರು, ಜುಲೈ 18, 2020 (www.justkannnada.in): ಟ್ಯಾಗೋರ್ ಅಂತರಾಷ್ಟ್ರೀಯ ಚಲನಚಿತ್ರೋತ್ವದಲ್ಲಿ ರುದ್ರಿ ಚಿತ್ರ ಮೂರು ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದೆ.
ಅತ್ಯುತ್ತಮ ಹೊಸ ನಿರ್ದೇಶನ ಬಡಿಗೇರ್ ದೇವೇಂದ್ರ, ಅತ್ಯುತ್ತಮ ನಟಿ ಪಾವನಾ ಗೌಡ ಹಾಗೂ ಅತ್ಯುತ್ತಮ ನಿರೂಪಣೆ ವಿಭಾಗದಲ್ಲಿ ಮೂರು ಪ್ರಶಸ್ತಿಗಳನ್ನು ರುದ್ರಿ ಚಿತ್ರ ಪಡೆದುಕೊಂಡಿದೆ.
ಸಂಪೂರ್ಣ ಉತ್ತರ ಕರ್ನಾಟಕ ಭಾಗದಲ್ಲಿಯೇ ಚಿತ್ರೀಕರಣಗೊಂಡ ಹಾಗೂ ಪೂರ್ಣ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ನಿರ್ಮಾಣವಾಗಿದೆ. ಈ ಚಿತ್ರ ಅತ್ಯಂತ ಗಂಭೀರ ವಿಷಯ ಒಳಗೊಂಡಿದ್ದು, ತನಗೆ ಆಗಿರುವ ಅನ್ಯಾಯದ ವಿರುದ್ಧ ಯುವತಿಯೊಬ್ಬಳು ಪ್ರತೀಕಾರ ತೀರಿಸಿಕೊಳ್ಳುವ ಕಥೆಯ ಹಂದರವನ್ನು ಹೊಂದಿದೆ.






