ಆರ್.ಆರ್ ನಗರ ಉಪಚುನಾವಣೆ: ಜೆಡಿಎಸ್ ಅಭ್ಯರ್ಥಿ ಘೋಷಣೆ…

Promotion

ಬೆಂಗಳೂರು,ಅಕ್ಟೋಬರ್,13,2020(www.justkannada.in): ತೀವ್ರಕುತೂಹಲ ಮೂಡಿಸಿರುವ ಆರ್.ಆರ್ ನಗರ ಉಪಚುನಾವಣಾ ಕ್ಷೇತ್ರದ ಕಣ ರಂಗೇರಿದ್ದು ಈಗಾಗಲೇ ಕಾಂಗ್ರೆಸ್ ನಿಂದ  ಐಎಎಸ್ ಅಧಿಕಾರಿ ದಿ. ಡಿ.ಕೆ ರವಿ ಅವರ ಪತ್ನಿ ಕುಸುಮಾ ಅವರಿಗೆ ಟಿಕೆಟ್ ನೀಡಿದರೇ ಬಿಜೆಪಿ ಇಂದು ಅಥವಾ ನಾಳೆ ಅಭ್ಯರ್ಥಿಯನ್ನ ಫೈನಲ್ ಮಾಡಲಿದೆ. ಈ ನಡುವೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡಿದೆ.jk-logo-justkannada-logo

ಆರ್. ಆರ್ ನಗರ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಜ್ಞಾನಭಾರತಿ ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಲಾಗಿದೆ. ಈ ಕುರಿತು ಮಾತನಾಡಿ ಮಾಹಿತಿ ನೀಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, “ಜ್ಞಾನ ಭಾರತಿ ಕೃಷ್ಣಮೂರ್ತಿ ಪಕ್ಷದ ಅಭ್ಯರ್ಥಿಯಾಗಿದ್ದಾರೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತನಿಗೆ ಟಿಕೆಟ್ ಕೊಟ್ಟಿದ್ದೇವೆ. ಎಲ್ಲರೂ ಅವರನ್ನು ಬೆಂಬಲಿಸಬೇಕು” ಎಂದು  ಹೇಳಿದ್ದಾರೆ.

“ಜ್ಞಾನ ಭಾರತಿ ಕೃಷ್ಣಮೂರ್ತಿ ತಂದೆ ನಮ್ಮ ಪಕ್ಷಕ್ಕಾಗಿ ದುಡಿದವರು. ಸ್ವಂತ ದುಡಿಮೆಯಿಂದ ಕೃಷ್ಣಮೂರ್ತಿ ಬೆಳೆದು ಬಂದಿದ್ದಾರೆ. ಕೃಷ್ಣಮೂರ್ತಿ ಪಕ್ಷದ ನಿಷ್ಟಾವಂತ ಕಾರ್ಯಕರ್ತ.  ಹೀಗಾಗಿ ಅವರಿಗೆ ಟಿಕೆಟ್ ಕೊಟ್ಟಿದ್ದು ನಾಳೆ ಅವರು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.rr-nagar-by-election-jds-candidate-declare-former-cm-hd-kumaraswamy

ಇನ್ನು ನನ್ನ ಹಾಗೂ ಮುನಿರತ್ನ ಮಧ್ಯೆ ಸ್ನೇಹ ಇದೆ. ಆದರೆ ಸ್ನೇಹವೇ ಬೇರೆ ಚುನಾವಣೆ ಬೇರೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.ನಾನು ಸಿನಿಮಾ ರಂಗದಿಂದ ಬಂದವನು ಮುನಿರತ್ನ ಕೂಡ ಸಿನಿಮಾ ಕ್ಷೇತ್ರದವರು. ಹೀಗಾಗಿ ನಮ್ಮ ನಡುವೆ ಸ್ನೇಹವಿದೆ. ಚುನಾವಣೆ ಸಂದರ್ಭದಲ್ಲಿ ಅದು ಅನ್ವಯಿಸಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.

Key words: RR nagar-by-election-JDS Candidate= Declare- former CM- hd kumaraswamy