100ನೇ ಟ್ವೆಂಟಿ-20 ಪಂದ್ಯಕ್ಕೆ ಹಿಟ್ ಮ್ಯಾನ್ ರೋಹಿತ್ ಶರ್ಮಾ ರೆಡಿ !

Promotion

ಬೆಂಗಳೂರು, ನವೆಂಬರ್ 07, 2019 (www.justkannada.in): ರೋಹಿತ್ ಶರ್ಮಾ ಬಾಂಗ್ಲಾದೇಶ ವಿರುದ್ಧ ಗುರುವಾರ 100ನೇ ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯವನ್ನಾಡಲಿರುವ ಭಾರತದ ಮೊದಲ ಹಾಗೂ ವಿಶ್ವದ ಎರಡನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಪಾಕಿಸ್ತಾನ ಶುಐಬ್ ಮಲಿಕ್(111 ಪಂದ್ಯಗಳು)100ಕ್ಕೂ ಅಧಿಕ ಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿರುವ ವಿಶ್ವದ ಏಕೈಕ ಆಟಗಾರನಾಗಿದ್ದಾರೆ.

ರೋಹಿತ್ 2,452 ರನ್ ಗಳಿಸುವ ಮೂಲಕ ಗರಿಷ್ಠ ಟ್ವೆಂಟಿ-20 ರನ್ ಸ್ಕೋರರ್‌ಗಳ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ. ನಾಯಕ ವಿರಾಟ್ ಕೊಹ್ಲಿ(2,450 ರನ್)ಎರಡನೇ ಸ್ಥಾನದಲ್ಲಿದ್ದಾರೆ.