Sunday, September 20, 2026

BDA Apartments

ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ಕಡೆಯದಾಗಿ ಧನ್ಯವಾದ ಹೇಳಿದ್ದು ಯಾರಿಗೆ? BDA JK...
Home Front Page ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ಕಡೆಯದಾಗಿ ಧನ್ಯವಾದ ಹೇಳಿದ್ದು ಯಾರಿಗೆ?

ವರ್ಗಾವಣೆ ಬಳಿಕ ರೋಹಿಣಿ ಸಿಂಧೂರಿ ಕಡೆಯದಾಗಿ ಧನ್ಯವಾದ ಹೇಳಿದ್ದು ಯಾರಿಗೆ?

ಮೈಸೂರು, ಜೂ.06, 2021 : (www.justkannada.in news) : ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ ಮೈಸೂರಿಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಧನ್ಯವಾದ ಹೇಳಿದ್ದಾರೆ.

ಶನಿವಾರ ತಡರಾತ್ರಿಯಷ್ಟೆ ರೋಹಿಣಿ ಸಿಂಧೂರಿ ಅವರನ್ನು ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ವರ್ಗಾಯಿಸಿ ರಾಜ್ಯ ಸರಕಾರ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ‘ ಪ್ರಿಂಟ್ ಮೀಡಿಯಾ ವಾಟ್ಸ್ ಅಪ್ ಗ್ರೂಪ್ ‘ ನಲ್ಲಿ ಹೇಳಿಕೆ ಪೋಸ್ಟ್ ಮಾಡಿರುವ ರೋಹಿಣಿ ಸಿಂಧೂರಿ, ಮೈಸೂರಿನಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಕ್ಕೆ ಮೈಸೂರಿಗೆ ಧನ್ಯವಾದ ಹೇಳಿದ್ದಾರೆ.
ಸದ್ಯದ ಪರಿಸ್ಥಿತಿಯಲ್ಲಿ ನಾನು ನನ್ನ ಕೈಲಾದಷ್ಟು ಉತ್ತಮ ಕೆಲಸ ಮಾಡಿದ್ದೇನೆ ಎಂದಿರುವ ರೋಹಿಣಿ, ಜಿಲ್ಲಾಧಿಕಾರಿ ಗೃಹ ಕಚೇರಿಯಲ್ಲಿ ನಿರ್ಮಾಣಗೊಂಡಿರುವ ‘ಸ್ವಿಮ್ಮಿಂಗ್ ಪೂಲ್ ‘ ವಿವಾದಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿರುವ ಸ್ಪಷ್ಟನೆ ಪ್ರತಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದು, ಮೈಸೂರು ಡಿಸಿಯಾಗಿ ಇದು ನನ್ನ ಕಡೆ ಹೇಳಿಕೆ ಎಂದಿದ್ದಾರೆ.

key words : mysore-DC-Rohini.sindhoori-thanks-letter

My last post as DC mysuru. Thank u Mysuru for the opportunity. I did my best under the prevailing circumstances.