ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರ: ಅರ್ಜಿ ವಿಚಾರಣೆ ಅ.23 ಕ್ಕೆ ಮುಂದೂಡಿದ ಸಿಎಟಿ…

kannada t-shirts

ಮೈಸೂರು,ಅಕ್ಟೋಬರ್,16,2020(www.justkannada.in): ಮೈಸೂರು ಡಿಸಿಯಾಗಿ ರೋಹಿಣಿ ಸಿಂಧೂರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ  ಅವಧಿಗೂ ಮುನ್ನವೇ ತಮ್ಮನ್ನ ವರ್ಗಾವಣೆ ಮಾಡಿದ ಸರ್ಕಾರದ ನಿರ್ಧಾರ ಪ್ರಶ್ನಿಸಿ ಬಿ.ಶರತ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನ ಸಿಎಟಿ ಅಕ್ಟೋಬರ್ 23ಕ್ಕೆ ಮುಂದೂಡಿದೆ.jk-logo-justkannada-logo

ಅವಧಿಗೂ ಮುನ್ನ ವರ್ಗಾವಣೆ ಪ್ರಶ್ನಿಸಿ ಬಿ.ಶರತ್  ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಇಂದು  ಸಿಎಟಿಯಲ್ಲಿ ನಡೆಯಿತು. ಅರ್ಜಿ ವಿಚಾರಣೆ ವೇಳೆ  ಬಿ.ಶರತ್ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ, ಬಿ.ಶರತ್ ಅವರನ್ನ ಮೈಸೂರು ಜಿಲ್ಲಾಧಿಕಾರಿ ಹುದ್ದೆಯಿಂದ ನಿಯಮ ಬಾಹಿರವಾಗಿ ವರ್ಗಾವಣೆ ಮಾಡಲಾಗಿದೆ.  ಬಿ.ಶರತ್  ಅವರನ್ನು ಅವಧಿಪೂರ್ವ ವರ್ಗಾವಣೆ ಮಾಡಲಾಗಿದೆ. ಸರ್ಕಾರ ಎರಡು ವರ್ಷ ಕಡ್ಡಾಯ ಸೇವೆಯ ನಿಯಮವನ್ನ ಪಾಲನೆ ಮಾಡಿಲ್ಲ. ಜತೆಗೆ ಸಲಹಾ ಸಮಿತಿ ಅಭಿಪ್ರಾಯ ಪಡೆಯುವ ಪ್ರಕ್ರಿಯೆ ಪಾಲಿಸಿಲ್ಲ. ಹೀಗಾಗಿ ಸರ್ಕಾರದ ಕ್ರಮ ದುರುದ್ದೇಶಪೂರಿತವಾಗಿದೆ ಎಂದು ವಾದ ಮಂಡಿಸಿದರು. Rohini Sindhuri -  Mysore- DC- CAT- postponed –petition -April 23-- IAS Officer- B.Sharath

ಎ.ಎಸ್.ಪೊನ್ನಣ್ಣ ವಾದ ಮಂಡನೆ ಬಳಿಕ ಪ್ರತಿವಾದ ಮಂಡಿಸಲು ಎಜಿ ಮತ್ತೆ ಕಾಲಾವಕಾಶ ಕೋರಿದರು .ಈ ಹಿನ್ನೆಲೆ ಸಿಎಟಿ  ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 23 ಕ್ಕೆ ಮುಂದೂಡಿದೆ. ಇದು ಮೂರನೇ ಬಾರಿಗೆ ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ.

Key words: Rohini Sindhuri –  Mysore- DC- CAT- postponed –petition -April 23– IAS Officer- B.Sharath

website developers in mysore