ರಾ.ಹೆ 275 ರಸ್ತೆ ಕಾಮಗಾರಿ ಹಿನ್ನೆಲೆ: ನಾಲ್ಕು ರಾಜ್ಯ ಹೆದ್ದಾರಿಗಳು ಮದ್ದೂರು ಬಳಿ ಸಂಪರ್ಕ ಕಲ್ಪಿಸುವ ಬಗ್ಗೆ ಚರ್ಚೆ, ಶೀಘ್ರ ಕ್ರಮಕ್ಕೆ ಸೂಚನೆ.

Promotion

ಮಂಡ್ಯ,ಜುಲೈ,11,2022(www.justkannada.in):  ಬೆಂಗಳೂರು-ಮೈಸೂರು ರಾಷ್ಟ್ರಿಯ ಹೆದ್ದಾರಿ 275 ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಪ್ರಮುಖ ನಾಲ್ಕು ರಾಜ್ಯ ಹೆದ್ದಾರಿಗಳು ಮದ್ದೂರು ಪಟ್ಟಣದ ಬಳಿ ಸಂಪರ್ಕ ಕಲ್ಪಿಸುವ ಬಗ್ಗೆ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ವಿಧಾನ ಪರಿಷತ್  ಸದಸ್ಯ ದಿನೇಶ್ ಗೂಳಿಗೌಡ ಮತ್ತು ಮದ್ದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ  ಇಂದು ಬೆಂಗಳೂರಿನಲ್ಲಿ ಚರ್ಚಿಸಿದರು.

ಮದ್ದೂರು-ಮಳವಳ್ಳಿ, ಮದ್ದೂರು-ನಾಗಮಂಗಲ, ಮದ್ದೂರು-ತುಮಕೂರು, ಮದ್ದೂರು-ಹಲಗೂರು ನಾಲ್ಕು‌ ರಾಜ್ಯ ಹೆದ್ದಾರಿಗಳು ರಾಷ್ಟ್ರಿಯ ಹೆದ್ದಾರಿಯಿಂದ ಸಂಪರ್ಕ ಕಲ್ಪಿಸಲು ಮದ್ದೂರಿನ ನಿಡಘಟ್ಟ ಮತ್ತು ಚನ್ನೇಗೌಡನದೊಡ್ಡಿಯ ಬಳಿ ನಿರ್ಗಮನ ಮತ್ತು ಆಗಮನ ಕಲ್ಪಿಸಲು ಚರ್ಚಿಸಿ ರಾಷ್ಟ್ರಿಯ ಹೆದ್ದಾರಿ ಯೋಜನಾ ನಿರ್ದೇಶಕರಿಗೆ ತಕ್ಷಣ ಕ್ರಮವಹಿಸುವಂತೆ ಸೂಚನೆಯನ್ನು ಕೊಡಲಾಯಿತು.  ಹಾಗೂ ಕೂಡಲೇ ಈ ಭಾಗದ ರೈತರಿಗೆ, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಸುಲಲಿತ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿ ಸದ್ಯದಲ್ಲಿ ‌ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಕ್ರಮ‌ ಕೈಗೊಳ್ಳುವ ಬಗ್ಗೆ ಚರ್ಚಿಸಲಾಯಿತು.

ಮದ್ದೂರು ಪಟ್ಟಣ ಮೈಸೂರು -ಬೆಂಗಳೂರು ಹೆದ್ದಾರಿಯ ಮಧ್ಯ ಭಾಗದಲ್ಲಿದ್ದು ಇಲ್ಲಿಂದ ಹಲವು ರಾಜ್ಯ ಹೆದ್ದಾರಿಗಳನ್ನು ಸಂಪರ್ಕಿಸುವು ಪ್ರಮುಖ ಸ್ಥಳವಾಗಲಿದೆ. ಆದ್ದರಿಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮದ್ದೂರು ಪಟ್ಟಣ ಸಂಪರ್ಕ ಕಲ್ಪಿಸುವ ಆಗಮನ‌ ನಿರ್ಗಮನ ಸ್ಥಳಗಳ ಬಗ್ಗೆ ಜರೂರು ಕ್ರಮ ಕೈಗೊಂಡು ಜನರ‌ ಸಮಸ್ಯೆಗಳಿಗೆ ಸ್ಪಂದಿಸಲು ಸೂಚಿಸಲಾಯಿತು.

Key words: Road –connectivity-maddur-MP-Sumalath ambarish