ಆರೋಗ್ಯ ಕೇಂದ್ರಗಳ ಖಾಸಗೀಕರಣಕ್ಕೆ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾವಿರೋಧ

Promotion

ಮೈಸೂರು,ಸೆಪ್ಟೆಂಬರ್,11,2020(www.justkannada.in) : ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗೀಕರಣ ಮಾಡದಂತೆ ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ ವತಿಯಿಂದ ಪ್ರತಿಭಟನೆ ನಡೆಯಿತು.

jk-logo-justkannada-logo

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರಿದ ಪ್ರತಿಭಟನಾಕಾರರು ಸರಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು.

ಸಮಿತಿಯ ಸದಸ್ಯರಾದ ಎಂ.ಉಮಾದೇವಿ ಮಾತನಾಡಿ, ರಾಜ್ಯ ಸರಕಾರದ ಆರೋಗ್ಯ ಬಂದು ಯೋಜನೆಯಡಿಯಲ್ಲಿ ಮೈಸೂರು ಜಿಲ್ಲೆಯ 10ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಿಕೊಡಲು ಮುಂದಾಗಿರುವುದು ಆಘಾತಕಾರಿ ವಿಷಯ ಎಂದರು.

privatization-health-centers-Opposition-Socialist-Unity-Center- India

ಆರೋಗ್ಯ ಬಂಧು ಯೋಜನೆಯಡಿ ಯಾವುದೇ ಕಾರಣಕ್ಕೂ ಮೈಸೂರು ಜಿಲ್ಲೆಯ ಪ್ರಾಥಮಿಕ ಕೇಂದ್ರಗಳನ್ನು ಖಾಸಗೀಕರಣ ಮಾಡಬಾರದು. ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ಜನರಿಗೆ ಆರೋಗ್ಯ ಸೇವೆ ಒದಗಿಸಿ, ಮೈಸೂರಿನ ಕೋವಿಡ್ ಆಸ್ಪತ್ರೆ ಮತ್ತು ಕಾಳಜಿ ಕೇಂದ್ರಗಳಲ್ಲಿ ಉತ್ತಮ ಶುಚಿತ್ವ ಮತ್ತು ಆರೈಕೆ ಒದಗಿಸಿ ಅಗತ್ಯ ಸಿಬ್ಬಂದಿಗಳನ್ನು ನೇಮಿಸಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರಾದ ಚಂದ್ರಶೇಖರ್ ಮೇಟಿ, ಸಂಧ್ಯಾ, ಹರೀಶ್, ಸುನಿಲ್, ಚಂದ್ರಕಲಾ, ಆಸಿಯಾ, ಬಿ.ರವಿ ಮತ್ತಿತರರು ಭಾಗವಹಿಸಿದ್ದರು.

key words : privatization-health-centers-Opposition-Socialist-Unity-Center- India