ಭರವಸೆಯ ಯುವ ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆ

Promotion

ಬೆಂಗಳೂರು, ಮಾರ್ಚ್ 18, 2021 (www.justkannada.in): 

17ರ ಹರೆಯದ ಭರವಸೆಯ ಕುಸ್ತಿಪಟು ರಿತಿಕಾ ಫೋಗಟ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭರತ್‌ಪುರದಲ್ಲಿ ನಡೆದ ಕುಸ್ತಿ ಟೂರ್ನಮೆಂಟ್‌ನ ಫೈನಲ್ ಪಂದ್ಯದಲ್ಲಿ ಸೋತ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.

ಕುಸ್ತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾದ ಗೀತಾ ಫೋಬಟ್ ಹಾಗೂ ಬಬಿತಾ ಫೋಬಟ್ ಅವರ ಸೋದರ ಸಂಬಂಧಿ.

ಕೇವಲ 17ರ ಹರೆಯದ ರಿತಿಕಾ ಫೋಗಟ್ ಕುಸ್ತಿಯಲ್ಲಿ ದೊಡ್ಡ ಹೆಸರು ಮಾಡುವ ಭರವಸೆಯನ್ನು ಮೂಡಿಸಿದ್ದರು.