ದೇಶದ ಸಮಸ್ಯೆಗಳನ್ನ ಪರಿಹರಿಸಲು ಮುಂದಿನ ದಿನಗಳಲ್ಲಿ ಕಠಿಣ ಕ್ರಮ: ಬ್ರಿಟನ್ ಪ್ರಧಾನಿಯಾದ ಬಳಿಕ ರಿಷಿ ಸುನಕ್ ಚೊಚ್ಚಲ ಭಾಷಣ.

Promotion

ಲಂಡನ್,ಅಕ್ಟೋಬರ್,25,2022(www.justkannada.in): ಬ್ರಿಟನ್ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ. ದೇಶದ ಸಮಸ್ಯೆಗಳನ್ನ ಪರಿಹರಿಸಲು ಮುಂದಿನ ದಿನಗಳಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ನುಡಿದಿದ್ದಾರೆ.

ಬ್ರಿಟನ್ ಪ್ರಧಾನಿಯಾಗಿ ಇಂದು ರಿಷಿ ಸುನಕ್  ಪ್ರದಗ್ರಹಣ ಮಾಡಿದರು. ಬಳಿಕ ಬ್ರಿಟನ್ ಜನರನ್ನುದ್ದೇಶಿಸಿ ಚೊಚ್ಚಲ ಭಾಷಣ ಮಾಡಿದ ಅವರು, ನಾವು ನೀಡಿದ್ದ ಭರವಸೆ ಈಡೇರಿಸಲು ಹಗಲು ರಾತ್ರಿ ಶ್ರಮಿಸುತ್ತೇನೆ.  ದೇಶದ ಸಮಸ್ಯೆಗಳನ್ನ ಪರಿಹರಿಸಲು ಕಠಿಣ ಕ್ರಮಗಳನ್ನ ಕೈಗೊಳ್ಳಬೇಕಿದೆ.  ಮುಂದಿನ ದಿನಗಳಲ್ಲಿ ಕಠಿಣ ನಿರ್ಧಾರ ಜಾರಿ ಮಾಡುತ್ತೇವೆ. ದೇಶದ ಜನರಿಗಾಗಿ ಎಲ್ಲವನ್ನೂ ನೀಡುತ್ತೇವೆ.  ಬ್ರಿಟನ್ ಆರ್ಥಿಕ ಸಂಕಷ್ಟ ಅನುಭವಿಸುತ್ತಿದೆ.  ಆರ್ಥಿಕತೆ ಮೇಲೆತ್ತುವುದೇ ನನ್ನ ಮೊದಲ ಆದ್ಯತೆ ಎಂದರು.

ಬ್ರಿಟನ್ ಜನರ ನಂಬಿಕೆಯನ್ನ ಉಳಿಸಿಕೊಳ್ಳುತ್ತೇನೆ. ಹಣದುಬ್ಬರ ತಗ್ಗಿಸಲು ಕಠಿಣ ಕ್ರ ಮ ಕೈಗೊಳ್ಳುವೆ.  ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸುವೆ ಎಂದು ರಿಷಿಸುನಕ್ ತಿಳಿಸಿದರು.

Key words: Rishi Sunak- first speech- after –becoming- British -Prime Minister.