20 ರೂಪಾಯಿಗಾಗಿ ಎರಡು ವರ್ಷ ಕಾನೂನು ಸಮರ : ಕೊನೆಗೂ ಗೆದ್ದ ನಿವೃತ್ತ ಶಿಕ್ಷಕ.

ಮೈಸೂರು,ಆಗಸ್ಟ್,9,2022(www.justkannada.in): ನಿಗದಿತಕ್ಕಿಂತ ಹೆಚ್ಚುವರಿಯಾಗಿ 20 ರೂ. ವಸೂಲಿ ಮಾಡಿದ ವ್ಯಾಪಾರಿ ವಿರುದ್ಧ ಹೋರಾಡಿದ ಗ್ರಾಹಕನಿಗೆ ಕೊನೆಗೂ ಜಯ ಸಿಕ್ಕಿದೆ. ಸತತ ಮೂರು ವರ್ಷ ಜಿಲ್ಲಾ  ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ  ಹೋರಾಡಿದ ಗ್ರಾಹಕನ ಹಕ್ಕಿಗೆ ನ್ಯಾಯ ದಕ್ಕಿದೆ. ತಾನೇ ಸ್ವತಃ ವಕೀಲಿಕೆ ನಡೆಸುವ ಮೂಲಕ ವ್ಯಾಪಾರಿ ವಿರುದ್ಧ ವಾದ ಮಂಡಿಸಿದ್ದು,ಗೆದ್ದಿರುವುದು ವಿಶೇಷವಾಗಿದೆ.

ಹೌದು, ಮೈಸೂರಿನ ವಿಜಯ ನಗರದ ನಿವಾಸಿ, ನಿವೃತ್ತ ಶಿಕ್ಷಕ ಸತ್ಯನಾರಾಯಣ ಅವರು ಹೋರಾಟದ ಮೂಲಕ ಗ್ರಾಹಕರ ಹಕ್ಕನ್ನು ಪ್ರತಿಪಾದಿಸಿದ್ದಾರೆ. ದುಪ್ಪಟ್ಟು  ಬೆಲೆಗೆ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿಗಳಿಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ.

ಸತ್ಯನಾರಾಯಣ ಅವರು 2019 ರಲ್ಲಿ  ಹನುಮಂತರಾಜು ಮಾಲೀಕತ್ವದ ಮಾರುತಿ ಮ್ಯಾಚಿಂಗ್ ಸೆಂಟರ್‌ನಲ್ಲಿ  3 ಸ್ಯಾರಿ ಫಾಲ್ಸ್‌ ಗಳನ್ನು  ಖರೀದಿ ಮಾಡಿದ್ದರು. ಅಂಗಡಿ ಮಾಲೀಕ 30 ರೂ. ನಂತೆ 90 ರೂ. ಎಂಆರ್‌ಪಿ ದರವನ್ನು ಬಿಟ್ಟು 110 ರೂ.ಗಳನ್ನು ಸತ್ಯನಾರಾಯಣ ಅವರಿಂದ ಪಡೆದು ರಶೀದಿ ನೀಡಿದ್ದರು. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಅಂಗಡಿ ಮಾಲೀಕ ಬೇಜವಾಬ್ದಾರಿಯಿಂದ ಹಾರಿಕೆಯ ಉತ್ತರ ನೀಡಿದ್ದರು. ವ್ಯಾಪಾರಿಯ ವರ್ತನೆಯಿಂದ ಬೇಸತ್ತ  ಗ್ರಾಹಕ ಸತ್ಯನಾರಾಯಣ ಅವರು, ವ್ಯಾಪಾರಿಯಿಂದ 61 ಸಾವಿರ ರೂ. ಪರಿಹಾರ ನೀಡಬೇಕು ಎಂದು 2020ರಲ್ಲಿ  ಆಯೋಗದ ಮೊರೆ ಹೋಗಿದ್ದರು.

ಸತತ ಎರಡು ವರ್ಷ ಕಾಲ ನಡೆದ ವಿಚಾರಣೆ ಬಳಿಕ ಆಯೋಗದ ಅಧ್ಯಕ್ಷರು, ಗ್ರಾಹಕರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ  ವ್ಯಾಪಾರಿಗೆ ಎಂಆರ್‌ ಪಿಗಿಂತ ಹೆಚ್ಚುವರಿಯಾಗಿ 20 ರೂ. ಪಡೆದಿರುವುದು ಸೇರಿದಂತೆ ವ್ಯಾಪಾರಿಯಿಂದ ಉಂಟಾದ ತೊಂದರೆ, ಪ್ರಕರಣದ ವೆಚ್ಚ ಸೇರಿ 6,020 ರೂ. ಪಾವತಿಸುವಂತೆ  ಆಯೋಗದ ಅಧ್ಯಕ್ಷ ಬಿ.ನಾರಾಯಣಪ್ಪ ಆದೇಶ ಮಾಡಿದ್ದಾರೆ.

Key words:  retired –teacher- fought – two-year- legal battle – Rs 20 -won.

ENGLISH SUMMARY…

Two years of legal war for Rs. 20: Retd. teacher wins at last
Mysuru, August 9, 2022 (www.justkannada.in): A customer who approached the Consumer Court against a trader who collected Rs. 20 more for a product has found victory at last. The customer had slapped a case in the Consumer Court and fought for three years consecutively in this case. He advocated against the trader in court and won at last.
Retired teacher Satyanarayana, a resident of Vijayanagara, Mysuru is the person who has won the case in the Consumer Court. Thus, he has sent a signal of warning to all the traders and shopkeepers who sell products at a higher cost.
In 2019, Satyaranarayana purchased 3 saree falls at the Maruti Matching Center, owned by Hanumantharaju. The owner of the shop had demanded Rs. 110 from the purchaser, whereas the actual price was Rs. 30 for each saree fall, amounting to Rs. 90. Hanumantharaju had issued a receipt to Satyaranarayana for the purchase. When the purchaser questioned the shop owner, he replied arrogantly. The consumer Satyaranarayana who was irked with the shopkeeper’s behavior, appeared before the Consumer Court in 2020, demanding a sum of Rs. 61,000 compensation from the shop owner.
The case ran for two years continuously. After detailed inquiry and hearings, Forum Chairperson B. Narayanappa ordered the shopkeeper to pay a sum of Rs. 6,020 to the consumer, for selling the product at a price of Rs.20 more than the MRP and causing trouble to the consumer.
Keywords: Satyanarayana/ Consumer Court/ Hanumantharaju/