ನನ್ನ ರಕ್ತದಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಕಂಡು ಬಂದ್ರೆ ಇಂದೇ ರಾಜಕೀಯ ನಿವೃತ್ತಿ-ಬಿ.ಕೆ ಹರಿಪ್ರಸಾದ್ ಗೆ ಸಿ.ಟಿ ರವಿ ತಿರುಗೇಟು.

BL Santosh - selection -candidates - Rajya Sabha-minister-CT Ravi.
Promotion

ಬೆಳಗಾವಿ,ಡಿಸೆಂಬರ್,26,2022(www.justkannada.in): ಸಿಟಿ ರವಿ ಕುಡಿದು ಮಾತಾಡ್ತಾರೆ ಎಂದು ಆರೋಪಿಸಿದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.

ನಾನು ಕುಡಿದು ಮಾತನಾಡ್ತೀನಿ ಅಂತಾ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ. ನನ್ನ ರಕ್ತದಲ್ಲಿ ಗಾಂಜಾ ಮದ್ಯಪಾನ ಕಂಡು ಬಂದರೇ ಇವತ್ತೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಸಿ.ಟಿ ರವಿ ಸವಾಲು ಹಾಕಿದ್ದಾರೆ.BL Santosh - selection -candidates - Rajya Sabha-minister-CT Ravi.

ಈ ಕುರಿತು ಮಾತನಾಡಿದ ಸಿ.ಟಿ ರವಿ, ನನ್ನ ಬ್ಲಡ್ ನಲ್ಲಿ ಗಾಂಜಾ, ಮದ್ಯಪಾನ ಮಾಡಿರೋದು ಏನಾದ್ರೂ ಸಿಕ್ಕಿದರೇ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ. ಆದರೆ ಬಿ.ಕೆ ಹರಿಪ್ರಸಾದ್ ಅವರ ರಕ್ತದಲ್ಲಿ ಏನಾದ್ರು ಸಿಕ್ಕರೆ ಏನು ಮಾಡ್ತಾರೆ? ಎಂದು ಪ್ರಶ್ನಿಸಿದರು.

Key words:  retired – politics -today -finding – alcohol – my blood-CT Ravi- BK Hariprasad